Saturday, 14th December 2024

ಶ್ರೀ ಕಂಬದ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ

ಗುಬ್ಬಿ : ತಾಲೂಕಿನ ಹಾಗಲವಾಡಿ ಹೋಬಳಿ ಮುಚ್ಚವೀರನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕಂಬದ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಮೇ 22 ರಿಂದ ಪ್ರಾರಂಭವಾದ ಜಾತ್ರಾ ಮಹೋತ್ಸವ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದು 28ರಂದು ಭಾನುವಾರ ಮುಂಜಾನೆಯಿಂದ ಗಂಗಸ್ಥಾನ ಮುಂತಾದ ಪೂಜಾ ಕಾರ್ಯಕ್ರಮಗಳು ನಡೆದು ಮಧ್ಯಾಹ್ನ 1 ಗಂಟೆಗೆ ವಿವಿಧ ಕಲಾತಂಡದೊಂದಿಗೆ ಅಕ್ಕ ಪಕ್ಕದ ಊರಿನ ದೇವರುಗಳ ಹಾಗೂ ಕಂಬದ ನರಸಿಂಹಸ್ವಾಮಿ ಉತ್ಸವ ದೊಂದಿಗೆ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಕಾರ್ಯಕ್ರಮಕ್ಕೆ ಗುಬ್ಬಿಯ ಜನಪ್ರಿಯ ಶಾಸಕ ಎಸ್ ಆರ್ ಶ್ರೀನಿವಾಸ್ ರವರು ರಥೋತ್ಸವದ ಗಾಳಿಗೆ ತೆಂಗಿನಕಾಯಿ ಹೊಡೆಯುವ ಮೂಲಕ ಬ್ರಹ್ಮ ರಥೋತ್ಸವ ಕ್ಕೆ ಚಾಲನೆ ನೀಡಿದರು.
ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿ ಕೃಪೆಗೆ ಪಾತ್ರರಾದರು. ಬಂದ ಭಕ್ತಾದಿಗಳಿಗೆ ಭಕ್ತ ಮಂಡಳಿ ವತಿಯಿಂದ ಊಟದ ವ್ಯವಸ್ಥೆ ಮಾಡಲಾಯಿತು ರಥೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಂತೆ ಚೋಳೂರು ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಬಾಬು ಕಿಲಾರಿ ಅವರು ಸಿಬ್ಬಂದಿ ಮೂಲಕ ಸೂಕ್ತ ಬಂದು ದೋಸ್ತ್ ಒದಗಿಸಿಕೊಟ್ಟರು.
ಈ ಸಂದರ್ಭದಲ್ಲಿ ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಎಂಆರ್ ರಂಗಶಾಮಯ್ಯ, ಮಾಜಿ ತಾ ಪಂ ಸ ಕರಿಯಮ್ಮ ರಮೇಶ್, ಗ್ರಾ ಪಂ ಸ ಶಕುಂತಲಾ ಮಾದೇವಯ್ಯ, ಆಶಾ, ಎಂಟಿ ತಿಮ್ಮಯ್ಯ, ವಿ ಎಸ್ ಎಸ್ ಎನ್ ನಿರ್ದೇಶಕ ಪುಟ್ಟರಾಜು ಎಮ್ ಪಿ, ಸಂತೋಷ್ ಎಂಬಿ, ಬಳ್ಳಾರಿ ನಾಗರಾಜು, ಮಾಜಿ ಅಧ್ಯಕ್ಷರಾದ ವರಲಕ್ಷ್ಮಿ ಮಂಜುನಾಥ್, ಪಿಡಿಓ ರಾಜೇಂದ್ರ ಪ್ರಸಾದ್, ಶಿಕ್ಷಕ ಕಂಬದ ನರಸಿಂಹಯ್ಯ, ಲಕ್ಷ್ಮಯ್ಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.