Friday, 13th December 2024

ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಆ.20 ರಿಂದ

ತುಮಕೂರು: ನಗರದ ಚಿಕ್ಕಪೇಟೆಯಲ್ಲಿರುವ  ಶ್ರೀ ರಾಘವೇಂದ್ರ ಸ್ವಾಮಿ ಮಠ (ದೊಡ್ಡರಾಯರ ಮಠ)ದಲ್ಲಿ ಮೂರು ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ನಡೆಯಲಿದೆ.
ಆ.20 ರಂದು ಪೂರ್ವಾರಾಧನೆ, ಆ.21ರಂದು ಮಧ್ಯಾರಾಧನೆ ಪ್ರಯುಕ್ತ ಹೋಮ, ವೇದ ಪಾರಾಯಣ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ. ಆ.22ರಂದು ಉತ್ತರಾಧನೆ ಪ್ರಯುಕ್ತ ಬೆಳಗ್ಗೆ 10 ಕ್ಕೆ ಮಹಾರಥೋತ್ಸವ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಯರ ಕೃಪೆಗೆ ಪಾತ್ರರಾಗಬೇಕೆಂದು ಎಂದು ಮಠಾಧಿಕಾರಿ ಗುರುರಾಜ ಆಚಾರ್ಯ ಅವರು ಮನವಿ ಮಾಡಿದ್ದಾರೆ.