Friday, 13th December 2024

ತೆರಿಗೆ ಹಣ: ಮಂತ್ರಿ ಮಾಲ್ ಗೆ ಬೀಗ

ಬೆಂಗಳೂರು: ತೆರಿಗೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಬೆಳ್ಳಂ ಬೆಳಗ್ಗೆ ಮಂತ್ರಿ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದು ಶಾಕ್ ನೀಡಿದ್ದಾರೆ.

ತೆರಿಗೆ ಹಣ ಪಾವತಿಸದ ಹಿನ್ನೆಲೆ ಮಂತ್ರಿ ಮಾಲ್ ಲೈಸನ್ಸ್ ರದ್ದುಪಡಿಸಲಾಗಿದೆ ಎಂದು ನೋಟಿಸ್ ಅಂಟಿಸಲಾಗಿದೆ. 32 ಕೋಟಿ ರುಪಾಯಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಮಾಲ್ ಗೆ ಬೀಗ ಜಡಿಯಲಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆಯೂ 8 ಬಾರಿ ಮಾಲ್‌ಗೆ ಬಿಬಿಎಂಪಿ ಬೀಗ ಹಾಕಿತ್ತು.

ಮಾಲ್‌ನವರು ಕೋರ್ಟ್ ಮೂಲಕ ಬೀಗ ಓಪನ್ ಮಾಡಿಸಿಕೊಂಡು ವ್ಯವಹಾರ ಮಾಡುತ್ತಿದ್ದರು. ‌ಇಂದಿನಿಂದ ಭಾನುವಾರದ ವರೆಗೆ ಸರ್ಕಾರಿ ರಜೆ ಇರುವುದರಿಂದ ಹೆಚ್ಚಿನ ಗ್ರಾಹಕರು ಬರುವ ನಿರೀಕ್ಷೆ ಇತ್ತು.

ಇದೀಗ ಮಾಲ್’ಗೆ ಬಿಬಿಎಂಪಿ ಬೀಗ ಜಡಿದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಿಬಿಎಂಪಿ ಮತ್ತು ಮಾಲ್ ಪರವಾಗಿರುವ ವಕೀಲರ ತಂಡ ಬೀಡು ಬಿಟ್ಟಿದೆ.