Wednesday, 11th December 2024

ಮದುವೆ ಮಾಡಿಸುವಂತೆ ಪೊಲೀಸರಿಗೆ ಯುವತಿಯರು ದುಂಬಾಲು

ತುಮಕೂರಿನಲ್ಲಿ ಸಲಿಂಗ ಪ್ರೇಮ ಸದ್ದು

ತುಮಕೂರು: ದಿನೇ, ದಿನೇ ಸಲಿಂಗ ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸಲಿಂಗಿಗಳ ಮದುವೆಯೂ ಸಹ ಅಧಿಕಗೊಳ್ಳುತ್ತಿದ್ದು, ತುಮಕೂರಿ ನಲ್ಲಿಯೂ ಸಲಿಂಗ ಪ್ರೇಮಿ ಯುವತಿಯರ ಮದುವೆ ವಿಚಾರ ಸದ್ದು ಮಾಡುತ್ತಿದೆ.

ಪಾವಗಡ ಮೂಲದ ಇಬ್ಬರು ವಿದ್ಯಾರ್ಥಿನಿಯರು ನಗರದ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು ಪರಸ್ಪರ ಪ್ರೀತಿ ಮಾಡು ತ್ತಿದ್ದೇವೆ, ನಮಗೆ ಮದುವೆ ಮಾಡಿಸಿ ಎಂದು ತಿಲಕ್ ಪಾಕ್೯ ಠಾಣೆಯ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಯುವತಿಯರಿಗೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ.

ಇತ್ತೀಚೆಗೆ ಪಿಯುಸಿ, ಪದವಿ ವ್ಯಾಸಂಗ ಮಾಡುತ್ತಿರುವ ಯುವಕ, ಯುವತಿಯರಲ್ಲಿ ಸಲಿಂಗ ಭಾವನೆ ಅಧಿಕಗೊಳ್ಳುತ್ತಿದ್ದು ಪೋಷಕರು ಅರಿವು ಮೂಡಿಸುವ ಅಗತ್ಯವಿದೆ ಎಂಬುದು ಮನೋತಜ್ಞರ ಅಭಿಪ್ರಾಯವಾಗಿದೆ.