Wednesday, 11th December 2024

ಗಣೇಶ ಹಬ್ಬದ ನಿಮಿತ್ತ ಶಾಂತಿ ಸಭೆ

ಕೋಲಾರ: ಗಣೇಶ ಹಬ್ಬದ ನಿಮಿತ್ತ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಶಾಂತಿ ಸಭೆ ಜರುಗಿತು.

ಪಿ.ಎಸ್.ಐ ಪ್ರೀತಮ್ ನಾಯಕ್ ಮಾತನಾಡುತ್ತಾ ಸರ್ವರೂ ಗಣೇಶ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಕರೆನೀಡಿದರು. ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಸರಕಾರ ಕೆಲವು ನಿಯಮಗಳನ್ನು ವಿಧಿಸಿದ್ದು ಅವುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸರಕಾರ ವಿಧಿಸಿರುವ ನಿಯಮಾವಳಿಗಳನ್ನು ಪಾಲನೆ ಮಾಡುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.

ಅಪರಾಧ ವಿಭಾಗದ ಪಿ.ಎಸ್.ಐ ಆರ್.ಎನ್ ಬಿರಾದಾರ ಇತರರು ಮಾತನಾಡಿದರು. ಮುಖಂಡರಾದ ಟಿ.ಟಿ ಹಗೇದಾಳ, ಅಂಜುಮನ್ ಕಮೀಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾ ಪೂರ, ಪ.ಪಂ ಸದಸ್ಯ ಸಿ.ಎಸ್ ಗಿಡ್ಡಪ್ಪಗೋಳ, ಇಸ್ಮಾಯಿಲ್ ತಹಶಿಲ್ದಾರ, ಕಾಶೀಮ ವಾಲಿಕಾರ, ಸಲೀಮ ಕೊತ್ತಲ್, ಗುಲಾಬ ಪಕಾಲಿ, ಮಹೇಶ ತುಂಬರಮಟ್ಟಿ ಹಾಗೂ ವಿವಿಧ ಗಣೇಶ ಪ್ರತಿಷ್ಠಾಪನಾ ಕಮೀಟಿಯ ಪದಾಧಿಕಾರಿಗಳು ಇತರರು ಇದ್ದರು.