Friday, 13th December 2024

ಉದ್ಯಮಿ ಶ್ರೀಕಾಂತ್ ಮೇಲೆ ಎಂಇಎಸ್ ಪುಂಡರಿಂದ ಗುಂಡಾಗಿರಿ

ಬೆಳಗಾವಿ: ಜೈ ಶಿವಾಜಿ, ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದವನಿಗೆ ಉದ್ಯಮಿ ಶ್ರೀಕಾಂತ್ ಬುದ್ಧಿವಾದ ಹೇಳಿದ್ದಕ್ಕೆ ಎಂಇಎಸ್ ಪುಂಡರಿಂದ ಗುಂಡಾಗಿರಿ ನಡೆದಿದೆ.

ತಾಲೂಕಿನ ಆನಂದವಾಡಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು.  ಬೆಳಗಾವಿ ತಾಲೂಕಿನ ಆನಂದವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆನಂದವಾಡಿಯಲ್ಲಿ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆ ವೇಳೆ ಜೈ ಶಿವಾಜಿ ಜೈ ಮಹಾ ರಾಷ್ಟ್ರ ಎಂದು ಘೋಷಣೆ ಮಾಡಲಾಯಿತು. ತಕ್ಷಣ ಕುಸ್ತಿ ಪಟುವಿನಿಂದ ಮೈಕ್ ಕಿತ್ತುಕೊಂಡು ಶ್ರೀಕಾಂತ್ ಒಂದೇ ನಾಡಿನ ಮಕ್ಕಳು ನಾವು ಸೋದರ ರಂತೆ ಎಂದು ಶ್ರೀಕಾಂತ್ ಹೇಳಿದ್ದಾರೆ.

 

ನೀನು ಸಮಸ್ಯೆ ಸೃಷ್ಟಿ ಮಾಡ್ತೀಯಾ ಎಂದು ಶ್ರೀಕಾಂತ್ ಉದ್ಯಮಿ ಕುಸ್ತಿ ಪಟುವಿಗೆ ಹೇಳಿದ್ದಾರೆ. ನಂತರ ಈ ವೇಳೆ ಎಂಇಎಸ್ ಪುಂಡರಿಂದ ಶ್ರೀಕಾಂತ್ ಮೇಲೆ ಗೂಂಡಾಗಿರಿ ನಡೆದಿದೆ ಎನ್ನುವ ವಿಡಿಯೋ ವೈರಲ್ ಆಗಿದೆ.