Monday, 9th December 2024

MLA G B JyotiGanesh: ಗಣೇಶ ಪ್ರತಿಷ್ಠಾಪನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

ತುಮಕೂರು: ನಗರದ ದಿಬ್ಬೂರು ಬಡಾವಣೆಯ ನಾಗರೀಕರು ಗಣೇಶ ಹಬ್ಬದ ಪ್ರಯುಕ್ತ ಬಡಾವಣೆಯಲ್ಲಿ ಗಣೇಶ ನನ್ನು ಪ್ರತಿಷ್ಠಾಪನೆಯನ್ನು ಮಾಡಲಾಗಿದ್ದು, ಪ್ರತಿ ದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: MLA Jyoti ganesh: ಸರಕಾರಿ ಶಾಲೆಗಳನ್ನು ಉಳಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ: ಶಾಸಕ ಜ್ಯೋತಿ ಗಣೇಶ್ 

ಈ ಕಾರ್ಯಕ್ರಮಕ್ಕೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ವಿನಾಯಕನ ಪೂಜೆಯಲ್ಲಿ ಪಾಲ್ಗೊಂಡು ದೇವರಿಗೆ ಪುಷ್ಪಾ ರ್ಚನೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಶಾಸಕರು ಈ ಭಾಗದ ಜನರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದರೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಕ್ಕಳಲ್ಲಿ ಮಾಡಿಸುತ್ತಿರು ವುದು ವಿಶೇಷವಾಗಿ ಕಾಣಿಸಿದ್ದು ತುಂಬಾ ಸಂತೋಷಕರ ವಿಷಯವಾಗಿದೆ ಎಂದರು. 

 ಈ ಸಂದರ್ಭದಲ್ಲಿ ದಿಬ್ಬೂರು ಬಡಾವಣೆಯ ಮುಖಂಡರುಗಳಾದ ಡಿ.ಕೆ.ಇಂದ್ರಕುಮಾರ್, ಹನುಮಂತರಾಜು, ಮನೋಹರ್ ಗೌಡ, ಜೀವನ್, ಪರಮೇಶ್, ಶ್ರೀನಿವಾಸ್, ದರ್ಶನ್, ನರಸಿಂಹಮೂರ್ತಿ, ಕುಮಾರ್ ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.