Friday, 13th December 2024

MLA Munirathna: ಪಾಪದ ಕೆಲಸ ಮಾಡಿದ್ದರೆ ರಕ್ತ ಕಾರಿ ಸಾಯುತ್ತೇನೆ: ಶಾಸಕ ಮುನಿರತ್ನ

MLA Munirathna

ಬೆಂಗಳೂರು: ಸತ್ಯ ಹೊಸಲು ದಾಟುವುದಕ್ಕೂ ಮುಂಚೆ, ಸುಳ್ಳು ಊರೆಲ್ಲಾ ಸುತ್ತುಕೊಂಡು ಬಂದಿರುತ್ತದೆ. ನನ್ನ ವಿಚಾರದಲ್ಲೂ ಅದೇ ಆಗಿದೆ. ಆದಿಚುಂಚನಗಿರಿ ಕಾಲಬೈರವನ ಮೇಲೆ ಆಣೆ ಮಾಡಿ ಹೇಳಿ ಹೇಳುತ್ತೇನೆ. ಒಂದು ವೇಳೆ ನಾನು ಅತ್ಯಾಚಾರ ಮಾಡಿದ್ದರೆ, ಪಾಪದ ಕೆಲಸ ಮಾಡಿದ್ದರೆ ಕ್ಷೇತ್ರದಲ್ಲೇ ರಕ್ತ ಕಾರಿ ಸಾಯುತ್ತೇನೆ ಎಂದು ಬಿಜೆಪಿ ಶಾಸಕ ಮುನಿರತ್ನ (MLA Munirathna) ಹೇಳಿದ್ದಾರೆ.

ಆರ್.ಆರ್. ನಗರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಅತ್ಯಾಚಾರ ಮಾಡಿದ್ದರೆ, ಗುತ್ತಿಗೆದಾರನ ಹೆಣ್ಣುಮಗಳ ಮೇಲೆ ಆಗಲಿ ಅಥವಾ ಅವರ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರೆ ರಕ್ತ ಕಾರಿ ಸಾಯಬೇಕು. ಸುಳ್ಳು ದೂರು ಕೊಡಬಾರದು. ನನ್ನ ಬಳಿ ಯಾರೇ ಬಂದರೂ ಏನಮ್ಮ, ಏನು ತಾಯಿ ಅಂತ ಹೆಣ್ಣುಮಕ್ಕಳನ್ನು ಮಾತನಾಡಿಸುತ್ತೇನೆ. ಆದರೆ ದೇವರಾಣೆಗೂ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ತಿಳಿಸಿದ್ದಾರೆ.

ನೀವು ಕೊಟ್ಟ ಭಿಕ್ಷೆ ಶಾಸಕ ಸ್ಥಾನವನ್ನು ನಾನು ಬಿಟ್ಟುಕೊಡಲ್ಲ. ನನ್ನ ಕಳುಹಿಸಿ ನೀವು ಏನಪ್ಪ ಬಾಳ್ತೀರಾ ಇಲ್ಲಿ, ನನ್ನ ಮುಂದೆ ಬಂದು ರಾಜೀನಾಮೆ ಕೊಡಿ ಅನ್ನಿ ಕೊಡುತ್ತೇನೆ. ಒಂದು ಮಗಳು ಇನ್ಮೊಂದು ಹೆಣ್ಣು ಮಗಳ ಮೇಲೆ ದೂರು ಕೊಡಬಾರದು. ಸುಳ್ಳು ದೂರು ಕೊಡಲು ಹೋಗಬಾರದು. ನಾಳೆ ಅವರ ಮಕ್ಕಳ ಭವಿಷ್ಯ ಏನು ಅಂತ ಯೋಚಿಸಬೇಕು. ನಿಮ್ಮ ಸ್ವಾರ್ಥಕ್ಕೆ ನೀವು ಎಂಎಲ್‌ಎ ಆಗಬೇಕು ಯಾಕೆ ಇನ್ನೊಬ್ಬರ ಮನೆ ಹಾಳು ಮಾಡ್ತೀರಾ ಅಂತ ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ | Shiv Sena: ಶಿವಸೇನೆ ಪ್ರಾದೇಶಿಕ ಪಕ್ಷವಾಗಿಯೇ ಉಳಿದಿದ್ದೇಕೆ? ವಾಜಪೇಯಿಯವರಿಂದಲೇ ಬಾಳಾ ಸಾಹೇಬ್‌ ಠಾಕ್ರೆಗೆ ಬಂದಿತ್ತಾ ವಿಶೇಷ ಮನವಿ?

ಎಚ್‌ಡಿಕೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಕ್ಷಮೆ ಕೋರಿದ ಜಮೀರ್‌ ಅಹ್ಮದ್‌

ಮೈಸೂರು: ಚನ್ನಪಟ್ಟಣ ಚುನಾವಣೆಯ ಪ್ರಚಾರದ ವೇಳೆ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಚಿವ ಜಮೀರ್‌ ಅಹ್ಮದ್‌ (Zameer ahmed) ಕ್ಷಮೆಯಾಚನೆ ಮಾಡಿದ್ದಾರೆ. ನನ್ನ ಮಾತಿನಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹೇಳುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.

ನಾನು ಮೊದಲಿನಿಂದಲೂ ಕುಮಾರಸ್ವಾಮಿ ಅವರನ್ನು ಕರಿಯಣ್ಣ ಅಂತಿದ್ದೆ. ಅವರು ನನ್ನನ್ನ ಕುಳ್ಳ ಎನ್ನುತ್ತಿದ್ದರು. ನಾನು ಈ ರೀತಿ ಕರೆಯುತ್ತಿರುವುದು ಇಂದು ನಿನ್ನೆಯದಲ್ಲ. ಬಹಳ ವರ್ಷಗಳ ಹಿಂದೆ ನಾವು ಅಷ್ಟೊಂದು ಅನ್ಯೋನ್ಯವಾಗಿ ಇದ್ದೆವು. ನನ್ನ ಮಾತಿನಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.