Saturday, 23rd September 2023

ವಿಧಾನಪರಿಷತ್‌ನ 14 ಸದಸ್ಯರ ಅಮಾನತು

ಬೆಳಗಾವಿ : ಸಭಾಪತಿಗಳ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಎಸ್‌.ಆರ್‌ ಪಾಟೀಲ್‌ ಸೇರಿ ವಿಧಾನಪರಿಷತ್‌ನ 14 ಸದಸ್ಯರನ್ನ ಅಮಾನತುಗೊಳಿಸಲಾಗಿದೆ.

ಸದನ ಬಾವಿಗೆ ಇಳಿದು ಪ್ರತಿಭಟನೆ ಮಾಡದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಪಕ್ಷ ನಾಯಕರಿಗೆ ಮನವಿ ಮಾಡಿದರು. ಸಭಾಪತಿಗಳ ಮನವಿಗೆ ಸ್ಪಂದಿಸದ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ಮುಂದುವರೆಸಿದರು. ನಂತರ ಸಭಾಪತಿ ಬಸವರಾಜ ಹೊರಟ್ಟಿ, ಸದನದ ಬಾವಿಗಿಳಿದು ಪ್ರತಿಭಟಿಸಿದ 14 ಸದಸ್ಯರನ್ನ ಒಂದು ದಿನದ ಮಟ್ಟಿಗೆ ಕಲಾಪದಿಂದ ಅಮಾನತುಗೊಳಿಸುವುದಾಗಿ ಆದೇಶ ಹೊರಡಿಸಿದ್ದಾರೆ.

ವೀಣಾ ಆಚ್ಚಯ್ಯ, ಸಿಎಂ ಇಬ್ರಾಹಿಂ, ಎಸ್‌.ಆರ್‌ ಪಾಟೀಲ್‌. ಪಿ.ಆರ್ ರಮೇಶ್‌, ಪ್ರತಾಪ್‌ ಚಂದ್ರ ಶೆಟ್ಟಿ, ನಾರಾಯಣ ಸ್ವಾಮಿ, ಯು.ಬಿ ವೆಂಕಟೇಶ್‌, ನಜೀರ್‌ ಆಹ್ಮದ್‌, ಸೇರಿ ಒಟ್ಟು 14 ಮಂದಿಯನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ ಸಭಾಪತಿ ಆದೇಶ ಹೊರಡಿಸಿದ್ದಾರೆ.

error: Content is protected !!