ಬೆಂಗಳೂರು: ನಿರೀಕ್ಷಿತ ಗುರಿ ತಲುಪಿ ಭಾರತ ಗೆಲ್ಲಲು ಸಾಗಲೇ ಬೇಕಿದೆ. ಮತ್ತೊಂದು ಅವಧಿಗೂ ನಿಮ್ಮ ಸಾರಥ್ಯದ ವಿಜಯ ರಥ ಇದು ಶತಕೋಟಿ ಭಾರತೀಯರ ಒಕ್ಕೊರಲ ಪ್ರಾರ್ಥನೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶುಭ ಹಾರೈಸಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾಗಿ ಇಂದಿಗೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶುಭ ಕೋರಿರುವ ವಿಜಯೇಂದ್ರ ಹತ್ತು ವರುಷದ ನಿಮ್ಮ ದಿಟ್ಟ ನಿಲುವುಗಳು, ಯುಗ ಮರೆಯದ ಹೆಜ್ಜೆ ಗುರುತುಗಳು ಎಂದು ಬಣ್ಣಿಸಿದ್ದಾರೆ.
ಅಂದು ಪ್ರಜಾಪ್ರಭುತ್ವದ ದೇಗುಲ ಸಂಸತ್ ಭವನದ ಬಾಗಿಲಿಗೆ ತಲೆ ಇಟ್ಟು ನಮಿಸಿ ಅಡಿಯಿಟ್ಟ ಪ್ರಥಮ ಪ್ರಧಾನಿ ನೀವು, ಸುದೀರ್ಘ ಹತ್ತು ವರುಷದ ಆಡಳಿತದಲ್ಲಿ ಜಗತ್ತಿನೆದುರು ಭಾರತ ತಲೆ ಎತ್ತಿ ಬೀಗುವಂತೆ ಸಾಧನೆ ಮಾಡಿದ ಸಾರ್ಥಕ ನೇತಾರ ನೀವು ಎಂದು ಹಾಡಿ ಹೊಗಳಿದ್ದಾರೆ.
ವಿಶ್ವ ಮೂಂಚೂಣಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಲು ಭಾರತ ಬಯಸುತ್ತಿದೆ ನಿಮ ಸಂತ ತೇಜಸ್ಸು, ತಪಸ್ವಿ ವರ್ಚಸ್ಸು ನಿಮ ದಿಟ್ಟ ನಡೆ, ನುಡಿಯ ಪ್ರಖರ ಧೀರತೆಯ ಯಶಸ್ಸು ಎಂದು ಮೋದಿಯವರ ಆಡಳಿತವನ್ನು ವಿಜಯೇಂದ್ರ ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪ್ರಶಂಸೆಯ ಸುರಿಮಳೆ ಗೈದಿದ್ದಾರೆ.