Wednesday, 11th December 2024

ನೀರಮಾನವಿ ಗ್ರಾಮದಲ್ಲಿ ವಿಶಿಷ್ಟವಾಗಿ ಮೊಹರಂ ಹಬ್ಬದ ಆಚರಣೆ

ಮಾನವಿ: ತಾಲೂಕಿನ ನೀರಮಾನವಿ ಗ್ರಾಮದಲ್ಲಿ ವಿಶಿಷ್ಟವಾಗಿ ಮೊಹರಂ ಹಬ್ಬವನ್ನು ಆಚಾರಿಸಲಾಯಿತು.

ಮೊಹರಂ ಪೀರಲ ದೇವರುಗಳನ್ನು ಕೂಡಿಸುವ ಆಶಾಖಾನೆಯಲ್ಲಿ ಅಬ್ಬು ಸಾಹುಕಾರ, ಪಕೀರಸಾಬ್, ಜಾಕೀರ, ಗೌಸ್, ಬಂದೇನವಾಜ , ಮೈಬೂ ಸೇರಿದಂತೆ ಅನೇಕ ಮುಸ್ಲಿಂ ಮುಖಂಡರು ಭಾಗವಹಿಸಿ ಇತರ ಪೀರಲ ದೇವರುಗಳನ್ನು ಕೂಡಿಸಿ ಹೂವಿನ ಅಲಂಕಾರ ಮಾಡಿ ನಂತರ ಪೀರಲ ದೇವರ ಕಡೆದಿನದ ಸರಗಾಸ್ತಿ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಗೂ ಗ್ರಾಮದ ಮನೆ, ಮನೆಗೆ ಪೀರಲ ದೇವರುಗಳ ಸರಗಾಸ್ತಿ ಸಾವರಿ ನಡಸಿದರು.

ಊರಿನ ಎಲ್ಲ ಧರ್ಮ ಜನಾಂಗದವರು ಬಹಳ ಸಂತೋಷದಿಂದ ಕೋಲು, ಗೆಜ್ಜೆ, ದೊಳ್ಳುಗಳ ಮೂಲಕ ಸಂಭ್ರಮ ಸಡಗರ ದಿಂದ ಮಾರೆಮ್ಮ ದೇವಸ್ಥಾನದ ಮುಂಭಾಗದ ಮೂಲಕ ಮದರಸಾಬ ಬಾವಿಯವರೆಗೂ ಮೆರವಣಿಗೆ ಮಾಡಿದರು.