Friday, 2nd June 2023

ಯಾಳಗಿಯಲ್ಲಿ ಕಲುಷಿತ ನೀರು ಸೇವನೆ: 15ಕ್ಕೂ ಹೆಚ್ಚು ಜನರು ಅಸ್ವಸ್ಥ

ಯಾದಗರಿ : ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿಯಲ್ಲಿ ಕಲುಷಿತ ನೀರು ಸೇವಿಸಿ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುರಪುರ ತಾಲೂಕಿನ ಯಾಳಗಿಯಲ್ಲಿ ಕುಡಿಯುವ ನೀರಿನ ಬಾವಿಗೆ ಚರಂಡಿ ನೀರು ಸೇರಿದೆ. ಇದೇ ನೀರನ್ನು ಗ್ರಾಮದ ಜನರಿಗೆ ಕುಡಿದ ಪರಿಣಾಮ, ಈ ನೀರು ಸೇವಿಸಿದ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.

ಚರಂಡಿ ನೀರು, ಕುಡಿಯುವ ನೀರಿನ ಜೊತೆಗೆ ಮಿಶ್ರಣವಾದ ನೀರನ್ನೇ ಜನರು ಕುಡಿದ ಪರಿಣಾಮ, ವಾಂತಿ, ಬೇಧಿಯಾಗಿ, ಸಮೀಪದ ಕೆಂಬಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚರಂಡಿ ನೀರು ಕುಡಿಯವ ನೀರಿನೊಂದಿಗೆ ಸೇರಿದ್ದರೂ ಕ್ರಮ ಕೈಗೊಳ್ಳದೇ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!