ಮೂಡಲಗಿ: ತಾಲೂಕಿನ ನಾಗನೂರ ಪಟ್ಟಣದ ಗೋಕಾಕ ಕ್ರಾಸ್ ಬಳಿ ಇರುವ, ವೈಭವ ರಾಜರತ್ನ ಶೆಟ್ಟಿ ಎಂಬುವವರ ಗದ್ದೆಯಲ್ಲಿರುವ ಬಾವಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬಾಲಕಿ ಮೃತಪಟ್ಟಿರುವ ಘಟನೆ ಮೂಡಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಬಾಲಕಿ ಪ್ರೀಯಾ ರವಿ ತಳವಾರ (11) ಎಂದು ತಿಳಿದು ಬಂದಿದ್ದು, ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಘಟನೆ ವಿವರ : ಪ್ರೀಯಾಳ ತಂದೆ ತಾಯಿ ಮೂಲತಃ ಮೂಡಲಗಿ ಪಟ್ಟಣದ ನಿವಾಸಿಯಾಗಿದ್ದು, ವೈಭವ ರಾಜರತ್ನ ಶೆಟ್ಟಿ ಎಂಬುವವ ಗದ್ದೆಯನ್ನು ಮಾಡಿಕೊಂಡಿದರು. ದಂಪತಿಗೆ ಮೂರು ಹೆಣ್ಣು ಮಕ್ಕಳಿದ್ದು, ಅದರಲ್ಲಿ ಕೊನೆಯ ಬಾಲಕಿ ಪ್ರೀಯಾ. ಮಂಗಳವಾರ ಸಂಜೆ ಶಾಲೆಯಿಂದ ಮನೆಗೆ ಬಂದು ತನ್ನ ಅಕ್ಕನ ಜೊತೆ ಊಟ ಮಾಡಿ ಗದ್ದೆ ಕಡಗೆ ಹೋಗಿ ಬರುವುದಾಗಿ ಹೇಳಿದ್ದಾಳೆ. ಆದರೇ ಮರಳಿ ಮನೆಗೆ ಬಾರದೆ ಇದ್ದಿದರಿಂದ ರಾತ್ರಿ ವೇಳೆ ಪಾಲಕರು ಹುಡುಕಾಟ ನಡೆಸಿದ ವೇಳೆ ಬಾವಿಯ ಹತ್ತಿರ ಬಾಲಕಿ ಹಾಕಿರುವ ಚಪ್ಪಲಗಳನ್ನ ನೋಡಿ ಸಾರ್ವಜನಿಕರ ಸಹಾಯದಿಂದ ತಡ ರಾತ್ರಿವರೆಗೂ ಹುಡು ಕಾಟ ನಡೆಸಿದ್ದಾರೆ.
ಬುಧವಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರಿಂದ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿದ್ದಾರೆ. ಸುಮಾರು 50 ಅಡಿ ಬಾವಿ ಆಳವಿರುವುದರಿಂದ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದ ಈಜು ಪರಿಣಿತ ಹಾಗೂ ಸ್ಥಳೀಯ ಜನರಿಂದ ಬಾಲಕಿ ಶವ ಪತ್ತೆ ಮಾಡಿ ಹೊರಕ್ಕೆ ತೆಗೆಯಲಾಗಿದೆ. ಮೃತ ಹೊರಕ್ಕೆ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.