Friday, 13th December 2024

ಅನೈತಿಕ ಸಂಬಂಧ ಶಂಕೆ: ಪತ್ನಿಯ ಬರ್ಬರ ಹತ್ಯೆ

Murder

ಆನೇಕಲ್: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆಯಾಗಿರುವ ಘಟನೆ ಆನೇಕಲ್ ಪಟ್ಟಣದ ಹೂವಾಡಿಗಾರ ಬೀದಿಯಲ್ಲಿ ನಡೆದಿದೆ.

25 ವರ್ಷದ ಪ್ರೇಮ ಕೊಲೆಯಾದ ಮಹಿಳೆ. ಪತಿ ವೆಂಕಟೇಶಾಚಾರಿಯಿಂದ ಪತ್ನಿ ಪ್ರೇಮ ಹತ್ಯೆ ಮಾಡಲಾಗಿದೆ. ಅನೈತಿಕ ಸಂಬಂಧ ಶಂಕೆ ಪತ್ನಿಯ ಹತ್ಯೆಯಾಗಿದೆ ಎನ್ನಲಾಗಿದೆ. ದಂಪತಿಗೆ 7 ವರ್ಷದ ಹೆಣ್ಣು ಮಗುವಿತ್ತು. ಅನೈತಿಕ ಸಂಬಂಧದ ವಿಚಾರವಾಗಿ ಮನೆ ಯಲ್ಲಿ ಪದೇ ಪದೇ ಗಲಾಟೆ ನಡೆಯಿತಿತ್ತು. ಪತ್ನಿ ಮೊಬೈಲ್ ನಲ್ಲಿ ಬೇರೊಬ್ಬನ ಜೊತೆ ಮಾತನಾಡುತ್ತಿದ್ದಳು ಎಂದು ಕೊಲೆ ಮಾಡಿದ್ದಾನೆ.

ಶನಿವಾರ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಮಚ್ಚಿನಿಂದ ಹಲ್ಲೆ ಮಾಡಿ ಕತ್ತು ಹಾಗೂ ಕೈ ಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಮನೆಯ ಬಾತ್ ಬಳಿ ಹೋಗುತ್ತಿದ್ದಂತೆ ಮಚ್ಚಿ ನಿಂದ ಹಲ್ಲೆ ಮಾಡಿದ್ದಾನೆ.

ಈ ಸಂಬಂಧ ಸ್ಥಳಕ್ಕೆ ಆನೇಕಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.