ತುಮಕೂರು: ತುಮಕೂರಿನ ಹಿರೇಮಠದ ವತಿಯಿಂದ ಡಿ. ೧೨ ಕ್ಕೆ ತುಮಕೂರು-ಬೆಂಗಳೂರು ನಿರ್ಮಿಸಿರುವ ತಪೋವನದ ಉದ್ಘಾಟನೆಗೆ ಆಗಮಿಸುವಂತೆ ಹಿರೇಮಠದ ಸ್ವಾಮೀಜಿಯವರು ಖುದ್ದು ಮೆಕ್ಕಾ ಮಸೀದಿಗೆ ಭೇಟಿ ನೀಡಿ, ಮುಸ್ಲಿಂ ಸಮುದಾ ಯದ ಮುಖಂಡರಿಗೆ ಆಹ್ವಾನ ಪತ್ರಿಕೆ ನೀಡಿ ಮನವಿ ಮಾಡಿದರು.
ಮುಸ್ಲಿಂ ಮುಖಂಡರ ಕೋರಿಕೆಯಂತೆ ಬಾರ್‌ಲೈನ್ ರಸ್ತೆಯಲ್ಲಿರುವ ಮೆಕ್ಕಾ ಮಸೀದಿಗೆ ಭೇಟಿ ನೀಡಿ ಶಿವಾಚಾರ್ಯ ಸ್ವಾಮೀಜಿ ಗಳು ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ನಿರತರಾಗಿದ ಹಿರಿಯ ಮುಸ್ಲಿಂ ಮುಖಂಡರು ಹಾಗೂ ಜನರಿಗೆ ಆಹ್ವಾನ ಪತ್ರಿಕೆಯನ್ನು ನೀಡಿ, ಇದೊಂದು ಜಾತ್ಯಾತೀತ ಮಠವಾಗಿದ್ದು, ಹಿರೇಮಠ ಬೆಳೆಯಲು ನಿಮ್ಮ ಸಹಕಾರ ವಿದೆ. ಅದೇ ಸಹಕಾರವನ್ನು ತಪೋವನ ಬೆಳೆಯಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಉದ್ಯಮಿ ತಾಜುದ್ದೀನ್ ಷರೀಫ್,ಹಲವಾರು ವರ್ಷಗಳಿಂದ ಮುಸ್ಲಿಂ ಭಾಂಧವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಸ್ವಾಮೀಜಿ ಅವರು ಖುದ್ದಾಗಿ ತಪೋವನ ಉದ್ಘಾಟನಾ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದ್ದಾರೆ. ದ್ವೇಷ ಸಾರುವ ಇಂದಿನ ದಿನಗಳಲ್ಲಿ,ಇಂತಹ ಪ್ರೀತಿಯ ಆಹ್ವಾನ ನಮ್ಮೆಲ್ಲರನ್ನು ಪುಳಕಿತ ಗೊಳಿಸಿದೆ. ಅವರ ಆಹ್ವಾನವನ್ನು ಪ್ರೀತಿಯಿಂದ ಒಪ್ಪಿಕೊಂಡು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇವೆ ಎಂದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಹೆಚ್.ಎಂ.ಎಸ್.ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಷಪಿ ಅಹಮದ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ,ಮಸೀದ್ ಕಾರ್ಯದರ್ಶಿ ಮಹಮದ್ ಸುಬಾನ್, ಡಾ.ನಯಾಜ್ ಬಹಳಷ್ಟು ಮುಖಂಡರು ಉಪಸ್ಥಿತರಿದ್ದರು.