Wednesday, 24th April 2024

ಗಲಭೆ ಬಂಧಿತರ ವಿರುದ್ಧ ಕೋಕಾ ಕಾಯ್ದೆ ಬಳಸಿ: ಪ್ರಮೋದ‌ ಮುತಾಲಿಕ್

ಹುಬ್ಬಳ್ಳಿ: ಗಲಭೆ ಸಂಬಂಧ ಬಂಧಿತರಾಗಿರುವವರ ವಿರುದ್ಧ ಕೋಕಾ ಕಾಯ್ದೆ ಹಾಕಬೇಕು. ಘಟನೆಗೆ ಕುಮ್ಮಕ್ಕು ನೀಡಿ ನಾಟಕವಾಡುತ್ತಿರುವ‌ರನ್ನು ಬಂಧಿಸಬೇಕು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ‌ ಮುತಾಲಿಕ್ ಒತ್ತಾಯಿಸಿದರು.

ಹಳೇ ಹುಬ್ಬಳ್ಳಿ ಗಲಭೆ ಪ್ರದೇಶ ಹಾಗೂ ದಿಡ್ಡಿ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದರು .

ರಜಾಕ್ ಅಕಾಡೆಮಿ ಮತ್ತು ರೀಬಿಲ್ಟ್ ಬಾಬರ್ ಮಸೀದಿ ಸಂಘಟನೆ ಮಾಡಿಕೊಂಡಿದ್ದಾರೆ. ನಗರದ ಎಲ್ಲ ಭಾಗಗಳಿಂದ ಜನರು ಗಲಭೆಗೆ ಬಂದಿದ್ದಾರೆ. ಒಂದು ಗಲಾಟೆಗೆ ಎಲ್ಲರೂ ಹೆದರುವುದು ಏಕೆ. ಗಲಭೆಯಲ್ಲಿದ್ದ ಸಾವಿರಕ್ಕೂ ಹೆಚ್ಚು ಜನರ ಬಂಧನ ಆಗಬೇಕು. ಮತ್ತೊಂದು ಕೆ.ಜಿ., ಡಿ.ಜಿ. ಹಳ್ಳಿ ರೀತಿಯ ಗಲಭೆಯನ್ನು ಪೊಲೀಸರು ತಪ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಸೀದಿ ಮೇಲೆ ಭಾಗವಾಧ್ವಜ ಹಾರಿಸಿದರೆ ಏನಾಗುತ್ತದೆ. ಬೆಂಗಳೂರು‌ ಮಸೀದಿ ಮೇಲೆ ಕೇಸರಿ ಧ್ವಜ, ಹಿಜಾಬ್ ಹಾಕಿಲ್ಲವೆ. ಗಲಾಟೆಗೆ ಇದೊಂದು ಕಾರಣ ಅಷ್ಟೇ. ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಾಶ್ಮೀರದಲ್ಲಿ ಮಾಡಿರುವ ಭಯ ಭೀತಿಯನ್ನು ಇಲ್ಲಿ ಸೃಷ್ಟಿಸುವ ಹುನ್ನಾರ ಇದಾಗಿದೆ.

ಮಸೀದಿಗಳಲ್ಲಿ ಆಜಾನ್ ಬಂದ್ ಮಾಡಲು ಮೇ 9ರ ತನಕ ಗಡುವು ನೀಡುತ್ತೇವೆ. ನಂತರ ದೇವಸ್ಥಾನಗಳಲ್ಲಿ ಓಂಕಾರ, ಭಜನೆ ಹೀಗೆ ಕಾರ್ಯಕ್ರಮಗಳು ಆರಂಭವಾಗಲಿದೆ. ನೆಪ ಮಾತ್ರಕ್ಕೆ ನೊಟೀಸ್ ನೀಡಿರುವುದು ಕಣ್ಣೊರೆಸುವ ತಂತ್ರವಾಗಿದೆ ಎಂದು ಆರೋಪಿಸಿದರು.

error: Content is protected !!