Saturday, 14th December 2024

ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ

ಮೈಸೂರು/ಬೆಂಗಳೂರು: ಕನ್ನಡ ಚಿತ್ರರಂಗದ ಬಹಳಷ್ಟು ವರ್ಷಗಳ ನಿರೀಕ್ಷೆಯಂತೆ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಬಜೆಟ್ ನೀಡಲಾಗಿದೆ.

ಮೈಸೂರಿನ ನಂಜನಗೂಡು ತಾಲ್ಲೂಕಿನಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಲು ಸರ್ಕಾರದ ನಿರ್ಧಾ ರವು 40 ವರ್ಷಗಳ ಹಳೆಯ ಯೋಜನೆಗೆ ಹೊಸ ಅಧ್ಯಾಯವಾಗಿದೆ. ಮೈಸೂರಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗಲಿದ್ದು ಇದು ಪಿಪಿಪಿ ಮಾದರಿಯಲ್ಲಿದೆ.

ನಂಜನಗೂಡಿನ ಹಿಮ್ಮಾವು ಎಂಬ ಪ್ರದೇಶದಲ್ಲಿ 70-80 ಎಕರೆ ನಿವೇಶನದಲ್ಲಿ  -ಖಾಸಗಿ ಸಹಭಾಗಿತ್ವದ ಮಾದರಿ ಯಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗಲಿದೆ ಎಂದು ಈ ಹಿಂದೆಯೇ ತಿಳಿಸಿತ್ತು.

ಬೆಂಗಳೂರು ಸಮೀಪದ ಹೆಸರಘಟ್ಟದಲ್ಲಿ 150 ಎಕರೆ ಪ್ರದೇಶದಲ್ಲಿ ಫಿಲ್ಮ್ ಸಿಟಿ ನಿರ್ಮಿ ಸುವ ಪ್ರಸ್ತಾವನೆಯನ್ನು ಪರಿಸರ ಕಾರ್ಯಕರ್ತರು ವಿರೋಧಿಸಿದ ನಂತರ ಸ್ಥಳ ಬದಲಾಯಿಸಲಾಗಿತ್ತು. 1980 ರಲ್ಲಿ, ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಫಿಲ್ಮ್ ಸಿಟಿ ಘೋಷಣೆ ಮಾಡಿದರು.

ದಕ್ಷಿಣದಲ್ಲಿ ಸಿನಿಮಾ ನಿರ್ಮಾಣಕ್ಕೆ ಚೆನ್ನೈ ಒಂದು ಕಾಮನ್ ಸ್ಥಳವಾಗಿತ್ತು. 90 ರ ದಶಕದ ಉತ್ತರಾರ್ಧದಿಂದ ದೊಡ್ಡ-ಬಜೆಟ್​ನ ಸಿನಿಮಾ ನಿರ್ಮಾಪಕರು ಹೈದರಾಬಾದ್‌ನ ರಾಮೋಜಿ ರಾವ್ ಫಿಲ್ಮ್ ಸಿಟಿಯನ್ನು ಅವಲಂಬಿಸಲಾರಂಭಿಸಿದರು.

ನಟ ರಿಷಬ್ ಶೆಟ್ಟಿ ಕೂಡಾ ಕೇಂದ್ರ ಸರ್ಕಾರದ ಮುಂದೆ ಫಿಲ್ಮ್ ಸಿಟಿ ನಿರ್ಮಾಣದ ದೊಡ್ಡ ಬೇಡಿಕೆ ಇಟ್ಟಿದ್ದರು.