Tuesday, 10th September 2024

ಮಾರ್ಚ್ 17ರ ಬಳಿಕ ಚುನಾವಣಾ ರಾಜಕೀಯದಿಂದ ನಿವೃತ್ತಿ: ಶ್ರೀನಿವಾಸ ಪ್ರಸಾದ್

ಮೈಸೂರು: ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ಮಾರ್ಚ್ 17ರ ಬಳಿಕ ಶ್ರೀನಿವಾಸ ಪ್ರಸಾದ್ ಚುನಾವಣಾ ರಾಜಕೀಯ ದಿಂದ ನಿವೃತ್ತಿ ತೆಗೆದುಕೊಳ್ಳಲಿದ್ದಾರೆ.

ಮಾರ್ಚ್ 17ರ ನಂತರ ಚುನಾವಣೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಹಿರಂಗ ಪ್ರಚಾರಕ್ಕೂ ಕೂಡ ಹೋಗುವು ದಿಲ್ಲ. ಆದರೆ ಬಿಜೆಪಿಯನ್ನು ಬೆಂಬಲಿಸಿ ಎಂದು ಎಲ್ಲರನ್ನೂ ಕೇಳಿಕೊಳ್ಳುತ್ತೇನೆ ಎಂದು ಚಾಮರಾಜನಗರ ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಾವಿಯೊಳಗಿನ ಕಪ್ಪೆ ಇದ್ದಂತೆ. ಪ್ರಧಾನಿ ನರೇಂದ್ರ ಮೋದಿ ಸಮುದ್ರದಲ್ಲಿ ಈಜಿರುವ ನಾಯಕ. ಸಿಎಂ ಸಿದ್ದರಾಮಯ್ಯ ರನ್ನು ಪ್ರಧಾನಿ ಮೋದಿಗೆ ಹೋಲಿಸಬೇಡಿ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುವುದನ್ನು ಕಲಿತಿದ್ದಾನೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಚಿವ ಜಮೀರ್ ಗೆ ಏನು ವ್ಯತ್ಯಾಸ ಇದೆ? ಹೇಳಿ ಇಬ್ಬರೂ ಕೂಡ ಸುಮ್ಮನೆ ಕೂಗಾಡುತ್ತಾರೆ. ಹೆರಿಗೆ ವಾರ್ಡ್ನಲ್ಲಿ ಇವರು ಕಿರುಚಿದರೆ ಸಹಜ ಹೆರಿಗೆ ಆಗಿಬಿಡುತ್ತದೆ. ರಾಷ್ಟ್ರಪತಿಗಳು ಸಚಿವೆ ನಿರ್ಮಲ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೀಗೆ ಕೂಗಾಡುವ ಸಿದ್ಧರಾಮಯ್ಯ ಬಗ್ಗೆ ಏನು ಮಾತನಾಡಬೇಕು ? ಗ್ಯಾರಂಟಿ ಯೋಜನೆಯ ಗುಂಗಿನಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ.

ಮೋದಿ ಸರ್ಕಾರದ ಜನಪರಗಳ ಯೋಜನೆ ಮುಂದೆ ಇದು ನಡೆಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

Leave a Reply

Your email address will not be published. Required fields are marked *