Wednesday, 18th September 2024

Nandi Anjinappa: ಪಕ್ಷದ್ರೋಹ ಮಾಡಿದವರಿಗೆ ಕಠೀಣ ಶಿಕ್ಷೆ ಶತಸ್ಸಿದ್ಧ -ಕಾಂಗ್ರೆಸ್ ಮುಖಂಡ ನಂದಿ ಆಂಜಿನಪ್ಪ ಎಚ್ಚರಿಕೆ


ಬಿಜೆಪಿ ನಾಯಕರಿಗೆ ನಗರಸಭೆ ಚುನಾವಣೆ ನೈತಿಕತೆ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲ ಎಂದು ವಾಗ್ದಾಳಿ

ಚಿಕ್ಕಬಳ್ಳಾಪುರ : ಕಾಂಗ್ರೆಸ್ ಪಕ್ಷದ ಚಿನ್ಹೆಯಡಿ ಗೆದ್ದು ನಗರಸಭಾ ಸದಸ್ಯರಾಗಿರುವವರು ಯಾವುದೋ ಆಮಿಷ ಕ್ಕೋ ಹಣಕ್ಕೋ ಅಧಿಕಾರ ದಾಹಕ್ಕೋ ಬಲಿಯಾಗುವವರಲ್ಲ.ಒಂದು ವೇಳೆ ಸಂಸದರ ಒತ್ತಡಕ್ಕೋ ಭೀತಿಗೋ ಹೆದರಿ ಸೆ.೧೨ರಂದು ಅಡ್ಡಮತದಾನದ ಮೂಲಕ ಪಕ್ಷದ್ರೋಹ ಮಾಡಿದರೆ ಅಂತಹವರನ್ನು ಕ್ಷಮಿಸುವ ಮಾತೇ ಇಲ್ಲ. ತುರ್ತಾಗಿ ಕಠಿಣ ಶಿಕ್ಷೆಗೆ ಗುರಿಯಾಗುವುದು ಖಚಿತ ಎಂದು ಕಾಂಗ್ರೆಸ್ ಹಿರಿಯ ಮುಖಂಡ ನಂದಿ ಆಂಜನಪ್ಪ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರಸಭೆ ಚುನಾವಣೆ ಸಂಬಂಧ ನಡೆಸಿದ ಸುದ್ದಿ ಗೋಷ್ಟಿಯಲ್ಲಿ ಅವರು ಮಾತನಾಡಿದರು.

ಸಂಸದ ಸುಧಾಕರ್ ಪಂಚಗಿರಿ ಬೋಧನಾ ಪ್ರೌಢಶಾಲೆಯ ಜಾಗ ನಗರಸಭೆಗೆ ಸೇರಿದ್ದು ಎಂದು ಅಧಿಕಾರಿಗಳ ಮೂಲಕ ನೋಟೀಸ್ ಕೊಡಿಸಿದ್ದೇ ರಾತ್ರೋ ರಾತ್ರಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನವೀನ್ ಕಿರಣ್ ನೈತಿಕತೆ ವಾಮಮಾರ್ಗದ ಬಗ್ಗೆ ಪಾಠ ಮಾಡುತ್ತಿದ್ದಾರೆ.ಇದರಲ್ಲಿ ನಿಮ್ಮ ತಾತ ತಂದೆ ನೀವು ಉಂಡಿದ್ದು ಸಾಕು. ಜನಸಾಮಾನ್ಯರ ಆಸ್ತಿ ಜನರಿಗೆ ಬಿಟ್ಟುಕೊಡಲು ನಿಮಗೇನು ಅಡ್ಡಿ? ಎಂದು ನವೀನ್ ಕಿರಣ್ ಅವರನ್ನು ಪ್ರಶ್ನಿಸಿದ ಆಂಜಿನಪ್ಪ ಸರಿ ಕಾಂಗ್ರೆಸ್ ಪಕ್ಷವೂ ಕೂಡ ನೋಟೀಸ್ ನೀಡಿ ಭೂಮಿ ವಶಪಡಿಸಿಕೊಳ್ಳಲು ಬಂದರೆ ಆಗೇನು ಮಾಡುತ್ತೀರಿ ಎಂದು ವಂಗ್ಯವಾಡಿದರು.

ಈ ಹಿಂದೆ ಆನಂದಬಾಬುರೆಡ್ಡಿ ಅಧ್ಯಕ್ಷರಾದ ಸಂದರ್ಭದಲ್ಲಿ ಕಾಂಗ್ರೆಸ್ ಚಿಹ್ನೆಯಡಿ ಗೆದ್ದು, ಅಡ್ಡ ಮತದಾನ  ಮಾಡಿದ್ದ ಹಲವು ಸದಸ್ಯರು ಲೋಕಸಭಾ ಚುನಾವಣೆ ವೇಳೆ ಬಂದು ಮತ್ತೆ ತಪ್ಪು ಮಾಡುವುದಿಲ್ಲ ಎಂದು ಹೇಳಿದ ಕಾರಣ ಆಗ ಉಚ್ಚಾಟನೆ ಪ್ರಕರಣ ವಾಪಸ್ ಪಡೆಯಲಾಗಿದೆ. ಆದರೆ ಈ ಬಾರಿ ಹಾಗೆ ಆಗಲು ಬಿಡೋದಿಲ್ಲ. ಪಕ್ಷದ ಚಿಹ್ನೆಯಡಿ ಗೆದ್ದು ಪಕ್ಷ ದ್ರೋಹ ಮಾಡಿದರೆ ಕಠಿಣ ಕಾನೂನು ಕ್ರಮ ಆಗಲಿದೆ ಎಂದು ಪುನರುಚ್ಚರಿಸಿದರು.

ಹಾರೋಬಂಡೆ ಸಮೀಪ ದಲಿತ ವರ್ಗವಾದ ಬೋವಿ ಸಮುದಾಯದ ಜಮೀನು ಕಬಳಿಸಿದ ವ್ಯಕ್ತಿ, ಸೇರಿದಂತೆ ನಗರಸಭೆಯ ಆಸ್ತಿ ಕಬಳಿಸಿದ ಯಾವೊಬ್ಬರನ್ನೂ ಬಿಡೋ ಪ್ರಶ್ನೆಯೇ ಇಲ್ಲ. ಅಲ್ಲದೆ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಸೇರಿದಂತೆ ಯಾರ ನಿರ್ಲಕ್ಷö್ಯವನ್ನೂ ಸಹಿಸೋದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ನಗರಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರೇ ಇದ್ದರೂ, ಶಾಸಕರು ಮತ್ತು ನಗರಸಭೆ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್‌ ನಲ್ಲಿದ್ದುಕೊಂಡೇ ಹೋರಾಟ ಮಾಡುತ್ತೇನೆ ಎಂದು ತಮ್ಮ ನಡೆ ಹಾಗೂ ಬದ್ಧತೆಯನ್ನು ಸ್ಪಷ್ಟಪಡಿಸಿದರು.

ಜಿಪಂ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್ ಮಾತನಾಡಿ,ಬಿಜೆಪಿ ನಾಯಕರು ಸೋಲಿನ ಭೀತಿಯಿಂದ ಎಂಎಲ್‌ಸಿ ಗಳನ್ನು ಮತದಾರರ ಪಟ್ಟಿಗೆ ಸೇರಿಸಿ ವಾಮಮಾರ್ಗದ ಮೂಲಕ ಅಧಿಕಾರಕ್ಕೇರಲು ಕಾಂಗ್ರೆಸ್ ಪಕ್ಷದ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಇದರ ಭಾಗವಾಗಿ  ಎಂಎಲ್‌ಸಿ ಎಂ.ಆರ್.ಸೀತಾರಾಮ್ ಅರಮನೆಯಂತಹ ಬಂಗಲೆ ಯನ್ನು ಬಿಟ್ಟು ಚಿಕ್ಕಬಳ್ಳಾಪುರದ ಬಾಡಿಗೆ ಮನೆಯ ನಿವಾಸಿಯಾಗಿ ಸೇರಿಸಿದ್ದಾರೆ. ಒಂದು ದಿನವೂ ಇಲ್ಲಿ ನೆಲೆಸದ ಕೋಲಾರದ ನಿವಾಸಿ ಎಂಎಲ್‌ಸಿ ಅನಿಲ್ ಕುಮಾರ್ ಅವರನ್ನು ಕೂಡ ಕೋರಚರ ಬೀದಿಯ ನಿವಾಸಿಯಾಗಿಸಲು ಹೊರಟಿದ್ದಾರೆ ಎನ್ನುತ್ತಾ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.ಕಾಂಗ್ರೆಸ್ ಪಕ್ಷ ಈ ನೆಲದ ಕಾನೂನಿನಂತೆ ನಡೆಯುವ ಪಕ್ಷವಾಗಿದ್ದು ಅದರಂತೆ ನಡೆಯಲಿದೆ.ಸೀತಾರಾಮ್ ಅವರಿಂದ ಸಾಕಷ್ಟು ಅನುಕೂಲ ಪಡೆದವರೇ ಅವರ ವಿರುದ್ಧ ದೂರುವುದು ಹಾಸ್ಯಾಸ್ಪದದಂತಿದೆ.ಹಿAದೆ ಸಂಸದರಾಗಿದ್ದ ಬಚ್ಚೇಗೌಡ ವೈ.ಎ, ನಾರಾಯಣಸ್ವಾಮಿ ಇಲ್ಲಿ ನೆಲೆಸಿದ್ದರೆ ಎಂಬುದನ್ನು ಬಿಜೆಪಿ ಮುಖಂಡರು ಅರಿತರೆ ಒಳಿತು ಎಂದು ಚುಚ್ಚಿದರು.

ನಗರಸಭೆ ಆಡಳಿತ ಕಳೆದ ಮೂರು ವರ್ಷದಿಂದ ತೀವ್ರ ಹದಗೆಟ್ಟಿದೆ. ಪಕ್ಷದ ಚಿಹ್ನೆಯಡಿ ಗೆದ್ದವರು ಪಕ್ಷದ ಆದೇಶ ದಂತೆ ವರ್ತಿಸಬೇಕು. ಆದರೆ ಬಿಜೆಪಿ ಬೆಂಬಲಿಸುವ ಮೂಲಕ ಈಗಾಗಲೇ ಪಕ್ಷ ದ್ರೋಹ ಮಾಡಲು ಮುಂದಾಗಿರು ವುದು ವಿಪರ್ಯಾಸ.ನಗರಸಭೆಯಲ್ಲಿ ಅಧ್ಯಕ್ಷರಾಗಬೇಕಾದಲ್ಲಿ ಕನಿಷ್ಠ ೨೦ ಸದಸ್ಯರ ಬೆಂಬಲದ ಅಗತ್ಯವಿದೆ. ಆದರೆ ಬಿಜೆಪಿಯಿಂದ ಗೆದ್ದಿರುವುದು ಕೇವಲ ೯ ಸದಸ್ಯರು ಮಾತ್ರ. ಉಳಿದವರನ್ನು ಖರೀದಿಸಲು ಮುಂದಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.ಇವರು ಮಾಡಿದರೆ ಸರಿ ಕಾಂಗ್ರೆಸ್ ಮಾಡಿದರೆ ತಪ್ಪು ಎಂಬ ಇವರ ದಗಲ್‌ಬಾಜಿ ನೀತಿ ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು.

ಜಿ.ಪಂ ಮಾಜಿ ಸದಸ್ಯ ಕೆ.ಎಂ.ಮುನೇಗೌಡ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಗವಿರಾಯಪ್ಪ, ರಾಮಸ್ವಾಮಿ, ವಿಜಿಕುಮಾರ್, ಕಾರ್ತಿಕ್, ರಾಮಚಂದ್ರಪ್ಪ, ನರೇಂದ್ರಬಾಬು, ನಾಯನಹಳ್ಳಿ ನಾರಾಯಣಸ್ವಾಮಿ, ಅಲ್ಲು ಅನಿಲ್, ಪ್ರೆಸ್ ಸೂರಿ, ಇದ್ದರು.

Leave a Reply

Your email address will not be published. Required fields are marked *