ಶಿರಸಿ: ಶಕ್ತಿದೇವತೆ ಶಿರಸಿ ಮಾರಿಕಾಂಬಾ ಜಾತ್ರೆಗೆ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯಸಂಘ ಗಂಡನಿಗೆ ತಕ್ಕ ಹೆಂಡತಿ ನಾಟಕ ಪ್ರದರ್ಶನಕ್ಕೆ ಬಂದಿದೆ.
ಇದು ಸಾಮಾಜಿಕವಾಗಿದ್ದು, ಯಾವುದೇ ಅಶ್ಲೀಲ ಹೊಂದಿರದ ಮನೆಯವರೆಲ್ಲ ಕುಳಿತು ನೋಡುವ ನಾಟಕವಾಗಿದೆ ಎಂದು ಮಾಲೀಕ ಪಾಪು ಕಲ್ಲೂರ್ ಹೇಳಿದರು.
ಅವರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಕಲಾವಿದರಾದ ಮೇಘರಾಜ, ರಿಯಾಜ್, ಶರತ್ ಕುಂಬ್ಲೆ ಉಪಸ್ಥಿತರಿದ್ದರು.