ದೀಕ್ಷಾ ಹೆರಿಟೇಜ್ ಸಂಸ್ಥೆಯ ದಶಮಾನೋತ್ಸವ ಕರ‍್ಯಕ್ರಮ
ತಿಪಟೂರು: ಭಾರತ ವಿಶ್ವಗುರು ಆಗುತ್ತಿದೆ ಎನ್ನುವ ಹೊತ್ತಲ್ಲಿ ನಾನಾ ಆಂತರಿಕ ಸಾಮಾಜಿಕ ಸಮಸ್ಯೆಗಳು ಉಲ್ಪಣಿಸುತ್ತಿವೆ. ಇಂದಿನ ಮಕ್ಕಳಲ್ಲಿ ರಾಷ್ಟ್ರೀಯತೆಯ ಅರಿವು ಮೂಡಿಸಿದಲ್ಲಿ ಭವಿಷ್ಯದ ಸುಂದರ ಭಾರತ ಸಾಧ್ಯ ಎಂದು ವೈದ್ಯ ಮತ್ತು ಕಲ್ಪತರು ರತ್ನ ಪ್ರಶಸ್ತಿ ಪುರಸ್ಕೃತ ಡಾ. ಜಿ.ಎಸ್.ಶ್ರೀಧರ್ ಅಭಿಪ್ರಾಯ ಪಟ್ಟರು.
ನಗರದ ದೀಕ್ಷಾ ಹೆರಿಟೇಜ್ ಶಾಲೆಯ ದಶಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಿರಿ ಸಂಭ್ರಮ ೨೦೨೨ ರ ದೀಕ್ಷಾ ಪ್ರಜಾ ಸೇವಕ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನಿತ ರಾಗಿ ಮಾತನಾಡಿದರು.
ಇಂದಿನ ಮಕ್ಕಳ ಮೇಲೆ ಬಹಳ ಒತ್ತಡವಿದೆ. ಪೋಷಕರು ಮತ್ತು ಶಿಕ್ಷಕರ ಮಹದಾಸೆ ನೆರವೇರಿಸುವ, ಕನಸು ನನಸು ಮಾಡುವ ಜವಾಬ್ಧಾರಿಗಳಿವೆ. ಆದರೆ ಪೂರಕ ವಾತಾವರಣ ಇಲ್ಲ. ಕಲಿಕೆಯ ಒತ್ತಡದೊಳಗೆ ಸಾಮಾಜಿಕ ಅರಿವು, ದೇಶ ಪ್ರಜ್ಞೆಯ ಕೊರತೆ ಎದ್ದು ಕಾಣುತ್ತಿದೆ. ಸಹಜ ಸ್ವಾತಂತ್ರ‍್ಯ ಇಲ್ಲದೇ ನಿಯಮಗಳೊಳಗೆ ಭವಿಷ್ಯ ಕಟ್ಟಿಕೊಳ್ಳುವ ಆತುರದಲ್ಲಿ ಎಲ್ಲವನ್ನೂ ಕಳೆದು ಕೊಳ್ಳುವ ಬೀತಿ ಇದೆ.
ಇಂದು ಕುಟುಂಬದ ಎಲ್ಲರೂ ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸುವ ಹಂತದಲ್ಲಿ ಮಕ್ಕಳಲ್ಲಿ ಬಂಧಿಯಾಗಿರುವ ಭಾವನೆಗಳು ಮನಸ್ಸಿನೊಳಗೆ ಕುಳಿತು ಮುಂದಿನ ದಿನಗಳಲ್ಲಿ ಬೇರೆ ರೀತಿಯಲ್ಲಿ ಪ್ರಕಟಿಸುವ ಅಪಾಯಗಳ ಬಗ್ಗೆ ನಾವು ಎಚ್ಚರವಹಿಸ ಬೇಕಾದ್ದು ತೀರಾ ಅನಿವಾರ್ಯ. ನಮ್ಮ ಕನಸುಗಳ ಸಕಾರಕ್ಕಾಗಿ ಮಕ್ಕಳ ಭವಿಷ್ಯಕ್ಕೆ ಪೆಟ್ಟು ಬೀಳುವ ಬಗ್ಗೆ ಪೋಷಕರು ಚಿಂತಿಸಬೇಕಾದ್ದು ತೀರಾ ಅಗತ್ಯ ಎಂದ ಅವರು ಮಕ್ಕಳಲ್ಲಿ ಸದ್ಗುಣಗಳ ಜೊತೆಗೆ ಸಾಮಾಜಿಕ ಪ್ರಜ್ಞೆ ಮತ್ತು ಜವಾಬ್ಧಾರಿ ಮೂಡಿಸಿ, ಭವಿಷ್ಯದ ಒಳ್ಳೆಯ ಪ್ರಜೆಗಳಾಗಿ ರೂಪಿಸುವ ಮೂಲಕ ಭವ್ಯ ಭಾರತದ ಕನಸು ನನಸು ಮಾಡ ಬೇಕೆಂದರು.
ಸಮಾಜದಲ್ಲಿ ಈಗ ಸ್ವಾರ್ಥ, ಅವಕಾಶವಾದಿತನಗಳು ಹೆಚ್ಚಿವೆ. ಸಮಾಜದಿಂದ ಏನೆಲ್ಲಾ ಪಡೆದ ನಾವು ಹಿಂತಿರುಗಿಸುವ ಮನೋ ಭಾವದಿಂದ ವಂಚಿತರಾಗುತ್ತಿದ್ದೇವೆ. ಎಂದಿಗೂ ಕೃತಜ್ಞತಾ ಮನೋಭಾವ ಶ್ರೇಯಸ್ಕರ ಎಂಬ ಸಾಮಾನ್ಯ ಜ್ಞಾನ ನಮ್ಮಲ್ಲಿರಬೇಕು. ಸಮಾಜದ ಪ್ರತಿ ಆಗುಹೋಗುಗಳಿಗೆ ಸ್ಪಂದಿಸಬೇಕು ಎಂದ ಅವರು ಸಾಧನೆಗೆ ಸುಲಭವಾದ, ಅಡ್ಡವಾದ ಯಾವುದೇ ಮಾರ್ಗ ಗಳಿಲ್ಲ. ಪರಿಶ್ರಮ ಸರಳೀಕರಣಕ್ಕೆ ಪರ್ಯಾಯವಿಲ್ಲ, ಸಾಧನೆಯ ಮಾರ್ಗದ ವಿಫಲತೆಗೆ ಕ್ಷಮೆ ಇಲ್ಲ. ಅರ್ಥಾತ್ ಸತತ ಪರಿಶ್ರಮ, ತ್ಯಾಗ, ಸತತ ಪ್ರಯತ್ನದ ಮೂಲಕ ಗುರಿ ಸಾಧಿಸಲೇ ಬೇಕು.
ಆಗ ಮಾತ್ರ ಯಶಸ್ಸು, ಸನ್ಮಾನ ನಮ್ಮ ಹುಡುಕಿ ಬರುತ್ತದೆ ಎಂದರು. ಸAಸ್ಥೆಯ ಅಧ್ಯಕ್ಷ ಸಿ. ಹನುಮರಂಗಯ್ಯ ಸಂಸ್ಥೆಯ ಪ್ರಗತಿ ಬಗ್ಗೆ ಸವಿವರವಾದ ವರದಿ ಓದಿ, ಶಾಲೆಯಲ್ಲಿ ಶೈಕ್ಷಣಿಕ ಪ್ರಗತಿ ಜೊತೆಗೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಾಕಷ್ಟು ಒತ್ತು ಕೊಟ್ಟು ಶಕ್ತಿ ಮೀರಿ ಪ್ರಗತಿ ಸಾಧಿಸಲಾಗಿದೆ. ಮಕ್ಕಳಲ್ಲಿ ಪಠ್ಯ, ಪಠ್ಯೇತರ ಚಟುವಟಿಕೆ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳ ಪರಿಚಯ ಮಾಡಿಕೊಡಲಾಗಿದೆ ಎಂದ ಅವರು ಹತ್ತು ವರ್ಷಗಳಲ್ಲಿ ಶಾಲೆ ಮಹತ್ತರ ಹೆಜ್ಹೆಗಳನ್ನು ಇಟ್ಟು ಯಶಸ್ಸಿನ ಹಾದಿ ಯಲ್ಲಿ ಮುನ್ನಡೆಯುವಲ್ಲಿ ಪೋಷಕರು, ಹಿತೈಷಿಗಳ ಸಹಕಾರ, ಪ್ರೋತ್ಸಾಹ ಅವಿಸ್ಮರಣೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಡಾ. ಮೀರಾ ಶ್ರೀಧರ್, ಕಲಾಕೃತಿ ತಂಡದ ತಿಪಟೂರು ಕೃಷ್ಣ, ಕಾರ್ಯದರ್ಶಿ ನವೀನ್, ಸಂಸ್ಥೆಯ ಹಿತೈಷಿ ಮಾದಿಹಳ್ಳಿ ರೇಣು ಉಪಸ್ಥಿತರಿದ್ದರು.
*
ನಮ್ಮ ವಿಧ್ಯಾಸಂಸ್ಥೆಯಲ್ಲಿ ರಾಷ್ಟçಕ್ಕಾಗಿ, ಸಮಾಜಕ್ಕೆ ಶ್ರಮಿಸುತ್ತಿರುವ ಸಾಧಕರನ್ನು ಶಾಲೆಗೆ ಆಹ್ವಾನಿಸಿ ಅವರ ಬಗ್ಗೆ ಮಕ್ಕಳಿಗೆ ತಿಳಿಸುತ್ತಾ ಮಕ್ಕಳಲ್ಲಿ ಸಂಸ್ಕೃತಿ, ದೇಶಾಭಿಮಾನ, ಸಂಸ್ಕಾರಯುತವಾದ ಶಿಕ್ಷಣವನ್ನು ನೀಡಲಾಗುತ್ತಿದೆ.
ನವೀನ್. ಕಾರ್ಯದರ್ಶಿ ದೀಕ್ಷಾ ಹೆರಿಟೇಚ್ ಸಂಸ್ಥೆ
Read E-Paper click here