ತುಮಕೂರು: ನಗರದ ಕೆ.ಆರ್.ಬಡಾವಣೆಯ ಶ್ರೀ ರಾಮ ಮಂದಿರದಲ್ಲಿ ತುಮಕೂರು ದಸರಾ ಸಮಿತಿ ಹಮ್ಮಿ ಕೊಂಡಿರುವ ನವರಾತ್ರಿ ಉತ್ಸವದಲ್ಲಿ ಆಯುಧಪೂಜೆಯ ದಿನ ಶುಕ್ರವಾರ ಶ್ರೀ ರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಬೆಂಗಳೂರಿನ ಭೂಮಿತಾಯಿ ಬಳಗ ತಂಡದ ಜಾನಪದ ವೈಭವದ ಗೀತಗಾಯನ ರಂಜಿಸಿತು.
ಇದೇ ವೇಳೆ ನಡೆದ ಸಮಾರಂಭದಲ್ಲಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ.ಎಸ್.ಪರಮೇಶ್, ಉಪಾಧ್ಯಕ್ಷ ಜಿ.ಕೆ.ಶ್ರೀನಿವಾಸ್, ಮುಖಂಡರಾದ ಆರ್.ಎ.ಸುರೇಶ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಮಹೇಶ್, ಖಜಾಂಚಿ ಜಿ.ಎಸ್.ಬಸವರಾಜು, ಸಂಯೋಜಕ ಕೆ.ಎನ್.ಗೋವಿಂದರಾವ್, ಕಾರ್ಯದರ್ಶಿಗಳಾದ ಹನುಮಂತರಾಜು, ಕೆ.ಶಂಕರ್, ಸಹಕಾರ್ಯದರ್ಶಿ ಕೆ.ಪರಶುರಾಮಯ್ಯ, ಮುಖಂಡರಾದ ಸ್ನೇಕ್ ದೀಪು, ಕೇಶವಮೂರ್ತಿ, ವೆಂಕಟೇಶ್, ಪುಟ್ಟರುದ್ರಯ್ಯ ಮೊದಲಾದವರು ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಿ ಅವರ ಸೇವೆ ಶ್ಲಾಘಿಸಲಾಯಿತು.
ಹಿಂದಿನ ದಿನ ನಡೆದ ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ರೇಖಾ ಶಿವಕುಮಾರ್ ಪ್ರಥಮ, ನಾಗಮಣ ದ್ವಿತೀಯ, ಮೇಘನಾ ತೃತೀಯ ಸ್ಥಾನ ಪಡೆದು ನಗದು ಬಹುಮಾನದೊಂದಿಗೆ ಪಾರಿತೋಷಕ ಸ್ವೀಕರಿಸಿದರು.
ಶನಿವಾರ ಬೆಳಿಗ್ಗೆ ಶ್ರೀ ರಾಮ ದೇವಸ್ಥಾನ ಆವರಣದಲ್ಲಿ ದಸರಾ ಸಮಿತಿಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಚಿತ್ತಾಕರ್ಷಕ ಬಣ್ಣಬಣ್ಣದ ರಂಗೋಲಿ ಬಿಡಿಸಿ ಗಮನ ಸೆಳೆದರು.