Wednesday, 11th December 2024

Navaratri: ದರ್ಗಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನವರಾತ್ರಿ ಉತ್ಸವ ಆಚರಣೆ

ಚಿಂತಾಮಣಿ: ನಗರದ ನರಸಿಂಹಪೇಟೆ ದಸರಾ ಹಬ್ಬದ ಸಂಭ್ರಮದಿಂದ ಕಂಗೊಳಿಸುತ್ತಿದ್ದು, ದರ್ಗಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರತಿವರ್ಷದಂತೆ, ಈ ವರ್ಷವೂ ನರಸಿಂಹಪೇಟೆಯ ಯುವಕರ ಬಳಗದ ವತಿಯಿಂದ ದುರ್ಗಾ ದೇವಿಯನ್ನು ಪ್ರತಿಷ್ಠಾಪನೆ ಮಾಡಿ, ಶ್ರದ್ಧೆ ಹಾಗೂ ಭಕ್ತಿಯಿಂದ ಹಬ್ಬವನ್ನು ಸಂಭ್ರಮಿಸಿದರು. ದಸರಾ ಹಬ್ಬದ ಈ ಕಾರ್ಯ ಕ್ರಮದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಮಲ್ಲೇಶ್ ಬಾಬು, ಶ್ರೀನಿವಾಸಪುರ ಶಾಸಕ ಜಿಕೆ ವೆಂಕಟ ಶಿವಾರೆಡ್ಡಿ ಹಾಗೂ ಸ್ಥಳೀಯ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ, ವೇಣುಗೋಪಾಲ್ ಸೇರಿದಂತೆ ಗಣ್ಯರು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.

ಹಬ್ಬದ ಆಚರಣೆಯಲ್ಲಿ, ಯುವಕರ ಬಳಗವು ತಮ್ಮ ಸಾಂಪ್ರದಾಯಿಕ ಉತ್ಸಾಹದೊಂದಿಗೆ ಸಮಾರಂಭವನ್ನು ಆಯೋಜಿಸಿ ಜನರ ಗಮನ ಸೆಳೆದಿದ್ದಾರೆ. ದಸರೆಗೆ ಪ್ರಯುಕ್ತ ದರ್ಗಾ ದೇವಿಗೆ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ನಡೆಯಿತು. ಇದಲ್ಲದೇ, ಜನತೆಗೆ ಉಚಿತ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾದಿಗಳು ಕುಟುಂಬ ಸಮೇತ ಬಂದು, ದೇವಿಯ ದರ್ಶನ ಪಡೆದರು ಮತ್ತು ನವರಾತ್ರಿಯ ಮಹತ್ವವನ್ನು ಮನಗಾಣಿಸಿದರು.

ನಮಗೆ ದಸರಾ ಹಬ್ಬವು ದೊಡ್ಡ ಸಂಭ್ರಮದ ಹಬ್ಬ ನಾಡಿನಲ್ಲಿ ಉತ್ತಮ ಮಳೆ, ಉತ್ತಮ ಬೆಳೆ ದೆಸೆಯಿಂದ ಜನರ ಜೀವನ ಉತ್ತಮವಾಗಿದೆ. ದಸರಾ ಹಬ್ಬದ ಉತ್ಸವವು ನಮ್ಮ ಸಂಸ್ಕೃತಿಯ ಮಹತ್ವವನ್ನು ಉಜ್ಜೀವನಗೊಳಿಸುತ್ತದೆ. ಈ ಸಂದರ್ಭದಲ್ಲಿ ನಮ್ಮ ಜನರೊಂದಿಗೆ ಹಬ್ಬವನ್ನು ಆಚರಿಸಲು ಸಿಗುವ ಸಂತೋಷ ಅನನ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು. ನವರಾತ್ರಿ ಹಬ್ಬವು ಪ್ರತಿ ವರ್ಷದಂತೆ ಈ ಬಾರಿ ಕೂಡಾ ವಿಜೃಂಭಣೆಯಿಂದ ನಡೆಯುತ್ತಿದೆ. ಯುವಕರ ಸಂಘಟನೆಯ ಪ್ರಯತ್ನವನ್ನು ಮೆಚ್ಚಿ, ಮುಂದಿನ ವರ್ಷವೂ ಇನ್ನಷ್ಟು ಅದ್ಧೂರಿಯಾಗಿ ಹಬ್ಬವನ್ನು ಆಚರಿಸಲು ನಾನು ಶುಭ ಹಾರೈಸುತ್ತೇನೆ” ಎಂದರು.