ತುಮಕೂರು: ಪಂಚವಾರ್ಷಿಕ ಯೋಜನೆಗಳ ಮೂಲಕ ಕೃಷಿ, ಕೈಗಾರಿಕೆ, ನೀರಾವರಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಭಾರತ ಅಭಿವೃದ್ದಿ ಹೊಂದಲು ಭದ್ರ ಬುನಾದಿ ಹಾಕಿದ ಪಂಡಿತ್ ಜವಹರಲಾಲ್ ನೆಹರು, ಈ ದೇಶ ಕಂಡ ಅಪ್ರತಿಮ ನಾಯಕ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪಂಡಿತ್ ಜವಹರಲಾಲ್ ನೆಹರು ಅವರ 134ನೇ ವರ್ಷದ ಜನ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ತಿನ್ನಲು ಅನ್ನವಿಲ್ಲದೆ ದೇಶದ ಜನರು ಪರಿತಪಿಸುತಿ ದ್ದಂತಹ ಕಾಲದಲ್ಲಿ ತಮ್ಮ ಪೂರ್ವಜರಿಂದ ಬಂದ ಸಾವಿರಾರು ಕೋಟಿ ಆಸ್ತಿಯನ್ನು ದೇಶದ ಖಜಾನೆಗೆ ದಾನ ಮಾಡಿದ ಮಹಾನ್ ದೇಶಪ್ರೇಮಿ ನೆಹರು ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ,ಮಕ್ಕಳಲ್ಲಿ ಅಪಾರ ಪ್ರೀತಿ ಹೊಂದಿದ್ದ ನೆಹರು,ದೂರದೃಷ್ಟಿ ಯುಳ್ಳ ನಾಯಕ.ಅವರು ಜಾರಿಗೆ ತಂದ ಪಂಚವಾರ್ಷಿಕ ಯೋಜನೆಗಳು ಹಾಗೆಯೇ ವಿದೇಶಾಂತ ನೀತಿಯಲ್ಲಿ ಅನುಸರಿಸಿದ ಪಂಚಶೀಲ ತತ್ವಗಳು ಪ್ರಮುಖವಾದವು.ಸ್ವಾತಂತ್ರ ಹೋರಾಟದಲ್ಲಿ ಗಾಂಧಿಜೀವರ ಬಲಗೈ ನಂತಿದ್ದು,ಹದಿನೆಂಟು ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿ, ದೇಶಕ್ಕೆ ಸ್ವಾತಂತ್ರ ತಂದುಕೊಡು ವಲ್ಲಿ ಮಹತ್ವದ ಪಾತ್ರ ವಹಿಸಿದರು ಎಂದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ಮಾತನಾಡಿ,ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ನೆಹರು ದೇಶಕ್ಕಾಗಿ ತನ್ನ ಕುಟುಂಬದ ಆಸ್ತಿಯನ್ನು ನೀಡಿ, ಸಾಮಾನ್ಯ ಪ್ರಜೆಯಂತೆ ಬದುಕಿದವರು.ಶಿಕ್ಷಣ, ಅರೋಗ್ಯ, ನೀರಾವರಿಗೆ ಅವರು ನೀಡಿದ ಕೊಡುಗೆ ಅಪಾರವಾದುದ್ದು, ಹಾಗಾಗಿ ಅವರನ್ನು ಅಧುನಿಕ ಭಾರತದ ಶಿಲ್ಪಿ ಎಂದು ಕರೆಯಲಾಗುತ್ತದೆ ಎಂದರು.
ಮುಖಂಡರಾದ ಸಿದ್ದಲಿಂಗೇಗೌಡ,ಮಾಜಿ ಶಾಸಕ ಎಚ್.ನಿಂಗಪ್ಪ,ವಾಲೆಚಂದ್ರು,ಪಂಚಾಕ್ ಷರಯ್ಯ,ಪಾಲಿಕೆ ಸದಸ್ಯ ಇನಾಯತ್, ಕೆಂಪಣ್ಣ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಫಯಾಜ್,ರೆಡ್ಡಿ ಚಿನ್ನಯಲ್ಲಪ್ಪ,ಸುಜಾತ,ಗೀತಾ,ಪ್ರಕಾ ಶ್,ಶ್ರೀಮತಿ ವಿಜಯ, ಮುಬೀನಾ,ಶಹಾಬುದ್ದೀನ್,ಆಟೋರಾಜು,ಸಂ ಜೀವಕುಮಾರ್,ತರುಣೇಶ್,ರೇವಣ್ಣಸಿದ್ ದಯ್ಯ,ಗೋವಿಂದೇಗೌಡ, ನಟರಾಜು, ಸಿಮೆಂಟ್ ಮಂಜುನಾಥ್,ಆದಿಲ್,ಶಿವಾಜಿ ಸೇರಿದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.