Wednesday, 11th December 2024

Nelamangala News: ಸರ್ಕಾರಿ‌ ನೌಕರರ ಸಂಘದ ಚುನಾವಣೆಗೆ ರಾಜಮ್ಮ ನಾಮಪತ್ರ ಸಲ್ಲಿಕೆ

ನೆಲಮಂಗಲ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಗೆ ದುರಾಗಿರುವ ಚುನಾವಣೆ ಪ್ರಕ್ರಿಯೆಯಲ್ಲಿ ತಾಲೂಕಿನ ಸರ್ಕಾರಿ‌ನೌಕರರು ನಾಮುಂದು ತಾಮುಂದು ಎಂದು ನಾಮಪತ್ರ‌ ಸಲ್ಲಿಕೆಗೆ ಮುಂದಾಗಿದ್ದಾರೆ.

ಒಟ್ಟು 29 ಮಂದಿ ಪದಾಧಿಕಾರಿಗಳಿರುವ ತಾಲೂಕು ಘಟಕಕ್ಕೆ ಸಂಘದ ಸದಸ್ಯತ್ವವನ್ನು ಪಡೆದಿರುವ ಸದಸ್ಯರು ಚುನಾವಣೆ‌ ಪ್ರಕ್ರಿಯೆ ಮೂಲಕ ಪದಾಧಿಕಾರಿಗಳನ್ನು ಆಯ್ಕೆಮಾಡಿದ ಬಳಿಕ ಸಂಘದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ.

18ಕೊನೆ ದಿನ : ಚುನಾವಣೆ ಅಭ್ಯರ್ಥಿಗಳು ನಾಮಪತ್ರಸಲ್ಲಿಸಲು‌ ಅ.18ಕೊನೆಯದಿನವಾಗಿದ್ದು ಅ.19 ರಂದು ನಾಮಪತ್ರ ಪರಿಶೀಲನೆ‌ ಮಾಡಲಾಗುತ್ತದೆ. ಅ.21 ನಾಮಪತ್ರ ಹಿಂಪಡೆಯಲು ಕೊನೆಯದಿನವಾಗಿದೆ. ಅ.28 ರಂದು ಬೆಳ್ಳಗ್ಗೆ 9 ಗಂಟೆಯಿಂದ ಸಂಜೆ 4ಗಂಟೆವರೆಗೆ ನಗರದ ಭಿನ್ನಮಂಗಲದಲ್ಲಿರುವ ಸಂಘದ ಕಚೇರಿಯಲ್ಲಿ‌ ಮತದಾನ ಪ್ರಕ್ರಿಯೆ ನಡೆಯಲಿದೆ. ಅದೇದಿನ ಮತದಾನದ ಬಳಿಕ ಮತ ಎಣಿಕೆ ಬಳಿಕ ಫಲಿತಾಂಶ ಪ್ರಕಟಣೆಯಾಗಲಿದೆ ಚುನಾವಣಾಧಿಕಾರಿ ದೇವಕಿ ಹಾಗೂ ಸಹಾಯಕ‌ ಚುನಾವಣಾಧಿಕಾರಿ ಎನ್.ಎಲ್.ನಾರಾಯಣ್ ತಿಳಿಸಿದ್ದಾರೆ.

ವಿಷಾದ : ತಾಲೂಕಿನಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿರುವ ನೌಕರರು ಸೇರಿ ಒಟ್ಟಾರೆ ಸಾವಿರಾರು ಮಂದಿ‌ ನೌಕರರಿದ್ದಾರೆ. ಮತದಾರರ ಸಂಖ್ಯೆ ಗನುಗುಣವಾಗಿ 29 ಸ್ಥಾನಗಳನ್ನು ಹಂಚಿಕೆಮಾಡಲಾಗಿದೆ. ತಾಲೂಕು ಘಟಕದಲ್ಲಿ ಒಟ್ಟು 1445 ಮತದಾರರಿದ್ದು ಸರ್ಕಾರಿ ಪ್ರಾಥಮಿಕ ಶಾಲೆಯ 701 ಹಾಗೂ ಪ್ರೌಡ ಶಾಲೆಗಳ 132 ಶಿಕ್ಷಕರು ಮತದಾನದ ಹಕ್ಕುಪಡೆದುಕೊಂಡು ಶಿಕ್ಷಣ ಇಲಾಖೆಯಲ್ಲಿ‌ ಸಿಂಹ ಪಾಲನ್ನು ಹೊಂದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 169ಮತದಾರರನ್ನು ಹೊಂದಿದ್ದು ಎರಡನೆ ಸ್ಥಾನವನ್ನು ಪಡೆದುಕೊಂಡಿದೆ.

11ನಾಮಪತ್ರ : ಇದೂವರೆಗೂ ತಾಲೂಕು ಪದಾಧಿಕಾರಿಗಳ ಸ್ಥಾನಕ್ಕೆ ಕೆ.ಎನ್.ನಾಗೇಶ್. ಹೆಚ್.ರಾಮಾಂಜುನಪ್ಪ.
ಎಸ್.ಎಂ.ರೇಣುಕಾಸ್ವಾಮಿ. ಎಂ.ಉಮಾಶಂಕರ್. ಎಲ್.ಗೋಪಿನಾಥ್. ಎಂಎಸ್.ರುದ್ರ ಮೂರ್ತಿ. ಆರ್.ಪುಷ್ಪಾವತಿ.
ಎಂ.ಗುರುಮೂರ್ತಿ. ಎನ್.ಎಂ.ಶಂಕರ್. ಭೂಮಪಕರಾದ ರಾಜಮ್ಮ. ಎಂ.ಆರ್.ಮಲ್ಲಿಕಾರ್ಜುನ ಅವರುಗಳು ನಾಮಪತ್ರಸಲ್ಲಿದ್ದಾರೆ.

ಸರ್ವೇ ಇಲಾಖೆಯ ಭೂಮಾಪಕರಾದ ರಾಜಮ್ಮ ನಾಮಪತ್ರ ಸಲ್ಲಿಸಿ ಮಾತನಾಡಿ ಸರ್ಕಾರಿ‌ನೌಕರರು ತಮ್ಮ ಸೇವಾವಧಿಯಲ್ಲಿ ಸಾಕಷ್ಟು ಸವಾಲುಗಳು‌ ಮತ್ತು‌ ಸಮಸ್ಯೆಗಳನ್ನು ಎದುರಿಸುತಿದ್ದಾರೆ ಅವರ ಸಮಸ್ಯೆಗಳನ್ನು ನೀಗಿಸುವ ಸಲುವಾಗಿ ಹಾಗೂ ಸರ್ಕಾರದಿಂದ ನೌಕರರಿಗೆ ದೊರಬೇಕಾದ ಸವಲತ್ತುಗಳನ್ನು‌ ಕೊಡಿಸಿಕೊಡಲು ಮತ್ತು ಹಿರಿಯ ಅಧಿಕಾರಿಗಳು ಮತ್ತು ನೌಕರರ ನಡುವೆ ಸೇತುವೆಯಾಗುವುದರೊಂದಿಗೆ ಅವರುಗಳ ಧ್ವನಿಯಾಗಿ ನೌಕರರ ಹಿತ ಮತ್ತು ಶ್ರೇಯಸ್ಸನ್ನು ಕಾಪಾಡುವ ಸದುದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನೌಕರರು ನನ್ನ ಬೆಂಬಲಿಸುತ್ತಾರೆಂಬ ಆಶಾಭಾವನೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Pralhad Joshi: ಹುಬ್ಬಳ್ಳಿಯಲ್ಲಿ ದತ್ತಾತ್ರೇಯ ಮೂರ್ತಿ ಭಗ್ನ; ಕಾಂಗ್ರೆಸ್‌ ದುರಾಡಳಿತ ಇದಕ್ಕೆ ಕಾರಣ ಎಂದ ಜೋಶಿ