Friday, 13th December 2024

ಬನಶಂಕರಿ ದೇವಸ್ಥಾನಕ್ಕೆ 107 ವರ್ಷಗಳ ನಂತರ ಹೊಸ ರಥ ಆಗಮನ

ಬೆಂಗಳೂರು: ಗರದ ಶ್ರೀಮಂತ ದೇವಾಲಯ ದಕ್ಷಿಣ ಬೆಂಗಳೂರಿನ ಬನಶಂಕರಿ ದೇವಸ್ಥಾನ ಭವ್ಯವಾದ ‘ಬನದ ಹುಣ್ಣಿಮೆ’ ಉತ್ಸವ ಆಚರಿಸಲು ಸಿದ್ಧವಾಗಿದೆ. ಸುಮಾರು 107 ವರ್ಷಗಳ ನಂತರ ಹೊಚ್ಚಹೊಸ ರಥವನ್ನು ಕೂಡಾ ಸ್ವಾಗತಿಸಲು ದೇವಾಲಯವು ಸಜ್ಜಾಗಿದೆ.
108ನೇ ವರ್ಷದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ರೂಪು ಗೊಂಡಿರುವ ಬನಶಂಕರಿ ದೇವಸ್ಥಾನವು ನೂತನ ಮರದ ರಥವನ್ನು ಅನಾವರಣಗೊಳಿಸಲಿದೆ.

ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯ ಅಧಿಕಾರಿಗಳು ಟೈಮ್ಸ್ ಆಫ್ ಇಂಡಿಯಾಕ್ಕೆ ಗುರುವಾರ ಮಹಾರಥೋತ್ಸವದ ಸಮಯದಲ್ಲಿ ರಥವು ದೇವಾಲಯದ ಸುತ್ತಲೂ ದೇವರನ್ನು ಕೊಂಡೊಯ್ಯುತ್ತದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ಕುಂಭಾಶಿಯಲ್ಲಿರುವ ಶ್ರೀ ವಿಶ್ವಕರ್ಮ ಕರಕುಶಲ ಮತ್ತು ಶಿಲ್ಪಕಲಾ ಕೇಂದ್ರದಲ್ಲಿ ರಥವನ್ನು ಕೆತ್ತಲಾಗಿದೆ. ಅಯೋಧ್ಯೆಯ ಶ್ರೀರಾಮ ದೇಗುಲಕ್ಕೆ ರಥ ಕೆತ್ತಿರುವ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ದಾಖಲೆ ಸಮಯದಲ್ಲಿ ಈ ರಥವನ್ನು ಕೆತ್ತಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ತಿಳಿಸಿದರು.

ಬೆಂಗಳೂರಿನಲ್ಲಿರುವ ಕೆಲವೇ ಕೆಲವು ‘ಎ’ ದರ್ಜೆಯ ದೇವಾಲಯಗಳಲ್ಲಿ ಇದು ಒಂದಾಗಿದೆ.