Tuesday, 10th December 2024

ಸ್ಯಾಂಡಲ್ ವುಡ್ ಗೆ ನಿಖಿಲ್ ಕುಮಾರಸ್ವಾಮಿ ಗುಡ್ ಬೈ

ಮಂಡ್ಯ: ಸ್ಯಾಂಡಲ್ ವುಡ್ ಗೆ ನಟ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಗುಡ್ ಬೈ ಹೇಳಿದ್ದಾರೆ.

ಇನ್ಮುಂದೆ ಸಿನಿಮಾ ಮಾಡೋದು ಬಂದ್ ಮಾಡಿದ್ದೇನೆ, ನಾನು ಫುಲ್ ಟೈಮ್ ರಾಜಕಾರಣಿ. ಸಿನಿಮಾ ಮಾಡೋದನ್ನು ಬಿಟ್ಟು ಪಕ್ಷದ ಕೆಲಸದತ್ತ ಗಮನ ಹರಿಸುತ್ತೇನೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಕುಮಾರಸ್ವಾಮಿ ಮೇಲೆ ಇಟ್ಟಿರುವ ಗೌರವ ಪ್ರೀತಿ, ವಿಶ್ವಾಸ ಉಳಿಸಿಕೊಳ್ತೀವಿ. ರಾಜ್ಯವನ್ನ ಕಟ್ಟುವ ಕಲ್ಪನೆ ಕುಮಾರಣ್ಣರದ್ದು. ದೂರದೃಷ್ಟಿ ಹೊಂದಿ ರುವ ಕುಮಾರಣ್ಣರ ನಾಯಕತ್ವವನ್ನ ಬಿಜೆಪಿ ಬಳಸಿಕೊಳ್ಳಲಿದೆ. ಕಾಂಗ್ರೆಸ್ಸಿಗರ ಟೀಕೆಗಳಿಗೆ ಮಂಡ್ಯ ಜನ ಉತ್ತರ ಕೊಟ್ಟಿದ್ದಾರೆ.

ಕುಮಾರಸ್ವಾಮಿ ಅವರು ಸಚಿವ ಸ್ಥಾನಕ್ಕಾಗಿ ಡಿಮ್ಯಾಂಡ್ ಮಾಡಲ್ಲ. ಕುಮಾರಸ್ವಾಮಿ ಹಿರಿತನ ಆಧಾರದ ಮೇಲೆ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.