Friday, 19th April 2024

ಮಾ.28-ಏ.11ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ: ಹಿಜಾಬ್​ ಧರಿಸಿ ಬಂದವರಿಗೆ ಪ್ರವೇಶ ಇಲ್ಲ

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.28 ರಿಂದ ಏ.11ರವರೆಗೆ ನಡೆಯಲಿದ್ದು, ಎಲ್ಲ ವಿದ್ಯಾರ್ಥಿಗಳೂ ಸಮವಸ್ತ್ರ ಧರಿಸಿಯೇ ಪರೀಕ್ಷೆಗೆ ಹಾಜರಾಗಬೇಕು. ಹಿಜಾಬ್​ ಧರಿಸಿ ಬಂದವರಿಗೆ ಪರೀಕ್ಷೆಗೆ ಪ್ರವೇಶ ಇಲ್ಲ ಎಂದು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಹಿಜಾಬ್​ ಕುರಿತು ಹೈಕೋರ್ಟ್​ ನೀಡಿರುವ ತೀರ್ಪನ್ನು ಪಾಲಿಸುತ್ತಿರುವ ಇಲಾಖೆ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಿಜಾಬ್​ ಧರಿಸಿ ಬಂದವ ರಿಗೆ ಪರೀಕ್ಷಾ ಕೇಂದ್ರ ಗಳಿಗೆ ಪ್ರವೇಶ ಕಲ್ಪಿಸುವುದಿಲ್ಲ ಎಂದಿದೆ. ಹೀಗಾಗಿ, ಹಿಜಾಬ್​ ಧರಿಸಿಯೇ ಬರುತ್ತೇವೆ ಎನ್ನುವವರು ಪರೀಕ್ಷೆ ಯಿಂದ ಹೊರಗುಳಿಯಬೇಕಾಗುತ್ತದೆ.

ಹಿಜಾಬ್​ ವಿಚಾರದಲ್ಲಿ ಹೈಕೋರ್ಟ್​ ನೀಡಿರುವ ತೀರ್ಪು ಪಾಲಿಸುತ್ತಿದ್ದು, ಹಿಜಾಬ್​ ಧರಿಸಿ ಬದವರಿಗೆ ಪರೀಕ್ಷೆಗೆ ಪ್ರವೇಶ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಹೇಳಿದ್ದಾರೆ.

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 15,387 ಶಾಲೆಗಳಿಂದ 8,73,846 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 4,52,732 ಗಂಡು ಮತ್ತು 4,21,110 ಹೆಣ್ಣು ಮಕ್ಕಳಿದ್ದು, 4 ವಿದ್ಯಾರ್ಥಿಗಳು ತೃತೀಯ ಲಿಂಗಿಗಳಾಗಿದ್ದಾರೆ. 3,444 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈಗಾಗಲೇ ಪ್ರವೇಶಪತ್ರ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಡೌನ್​ಲೋಡ್​ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು.

ಸಹಾಯವಾಣಿ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಸಹಾಯವಾಣಿ ಸಂಖ್ಯೆ: 080-23310075, 76 ಅನ್ನು ಸಂಪರ್ಕಿಸಬಹುದು.

ಮಾಸ್ಕ್​ ಕಡ್ಡಾಯ ಅಲ್ಲ: ಕರೊನಾ ಸೋಂಕಿನ ಪ್ರಕರಣಗಳು ಕಡಿಮೆ ಆಗಿರುವುದರಿಂದ ವಿದ್ಯಾರ್ಥಿಗಳು ಮಾಸ್ಕ್​ ಧರಿಸಿಸದೇ ಇದ್ದರೂ ಪ್ರವೇಶ ಕಲ್ಪಿಸಲು ನಿರ್ಧರಿಸಿದೆ.

error: Content is protected !!