Friday, 19th April 2024

ಪರಿಷತ್ ಮತದಾನ: ಪಾಲಿಕೆಗೆ ನಾಳೆ ಸಾರ್ವಜನಿಕರ ಪ್ರವೇಶವಿಲ್ಲ

shimoga Palike

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಸಭಾಂಗಣದ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಚುನಾವಣೆಯ ಮತದಾನ ವಿರುವುದರಿಂದ ಡಿ.10ರಂದು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ನಾಳೆ ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯದಿರುವ ಕಾರಣ ಸಾರ್ವ ಜನಿಕರು ಸಹಕರಿಸುವಂತೆ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಶಿವಮೊಗ ನಗರದ ಕೋಟೆರಸ್ತೆ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಡಿ.14ರಂದು 12.00 ರಿಂದ ಮ. 1.00 ರವರೆಗೆ ಅಂಚೆ ಅದಾಲತ್ ಏರ್ಪಡಿಸಲಾಗಿದೆ.

ಸಾರ್ವಜನಿಕರು ಅಂಚೆ ಇಲಾಖೆಯ ಬಗ್ಗೆ ಸಲಹೆ/ಅಹವಾಲುಗಳಿದ್ದಲ್ಲಿ ಅಂಚೆ ಅಧೀಕ್ಷರಿಗೆ ಡಿ.13ರ ಒಳಗೆ ವಿವರಗಳನ್ನು ಬರೆದು ಕಳುಹಿಸುವುದು.

ಡಿ.14 ರಂದು ಅಂಚೆ ಅದಾಲತ್‍ನಲ್ಲಿ ಭಾಗವಹಿಸುವಂತೆ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!