Saturday, 14th December 2024

ಎನ್.ಪಿ.ಎಸ್ ಸರಕಾರಿ ನೌಕರರಿಂದ ಜಾಗೃತಿ ಸಮಾವೇಶ ಡಿ.3ಕ್ಕೆ

ಚಿಂಚೋಳಿ: ಇದೇ ಡಿ.3ರಂದು ವೋಟ್ ಫಾರ್ ಓಪಿಎಸ್ ಅಭಿಯಾನದ ಪಾದಯಾತ್ರೆ ಮತ್ತು ಚಿಂಚೋಳಿ ಹಾರಕೂಡ ಕಲ್ಯಾಣ ಮಂಟಪದಲ್ಲಿ ತಾಲೂಕ ಮಟ್ಟದ ಎನ್.ಪಿಎಸ್ ನೌಕರರ ಜಾಗೃತಿ ಸಮಾವೇಶ ಹಾಗೂ ಓಪಿಎಸ್ ಸಂಕಲ್ಪದ ವಿಚಾರ ಸಂಕಿರಣ ಹಮ್ಮಿ ಕೊಳ್ಳಲಾಗಿದೆ ಎಂದು ಎನ್. ಪಿ. ಎಸ್ ನೌಕರರ ಸಂಘದ ತಾಲೂಕ ಅಧ್ಯಕ್ಷ ಶಿವಪ್ರಸಾದ್. ಪಿ. ಜಿ ಅವರು ತಿಳಿಸಿದ್ದಾರೆ.

2006ರ ನಂತರ ಸೇವೆಗೆ ಸೇರಿದ ನೌಕರರ ಬದುಕಿಗೆ ಮಾರಕವಾದ ಷೇರು ಪೇಟೆ ಆಧಾರಿತ ಅವೈಜ್ಞಾನಿಕ  ಎನ್ ಪಿ. ಎಸ್ ಯೋಜನೆ ರದ್ದುಪಡಿಸಿ, ನಿಶ್ಚಿತವಾದ ಹಳೆಯ ಪಿಂಚಣಿ ಪಡೆಯಲು ಡಿ.12 ರಂದು ಬೆಂಗಳೂರು ಫ್ರಿಡಂ ಪಾರ್ಕನಲ್ಲಿ ಮಾಡು ಇಲ್ಲವೇ ಮಡಿ ಅಂತಿಮ ಹೋರಾಟ ನಡೆಯಲಿದೆ.

ಈ ಹಿನ್ನಲೆಯಲ್ಲಿ ಡಿ.3 ರಂದು ಬೆಳಿಗ್ಗೆ 10.30ಕ್ಕೆ ವೋಟ್ ಫಾರ್ ಓಪಿಎಸ್ ಎಂಬ ಅಭಿಯಾ ನದ ಪಾದಯಾತ್ರೆಯನ್ನು ಚಂದಾ ಪೂರದ ಮಹಾತ್ಮ ಗಾಂಧಿ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಚಿಂಚೋಳಿ ಮುಖ್ಯ ರಸ್ತೆಯ ಮೂಲಕ ಶ್ರೀ ಹಾರಕೂಡ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 11.30 ಗಂಟೆಗೆ ಎನ್.ಪಿ.ಎಸ್ ತಾಲೂಕ ಮಟ್ಟದ ನೌಕರರ ಜಾಗೃತಿ ಸಮಾವೇಶ ಮತ್ತು ವಿಚಾರ ಸಂಕಿರಣ ದಲ್ಲಿ ಭಾಗವಹಿಸಲಿದ್ದು, ತಾಲೂಕಿನ ಎಲ್ಲಾ ಇಲಾಖೆಯ ಎನ್. ಪಿ. ಎಸ್ ನೌಕರರು ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟಕ್ಕೆ ಶಕ್ತಿ ತುಂಬಿ ಯಶಸ್ವಿಗೊಳಿಸಬೇಕೆಂದು ಅಧ್ಯಕ್ಷ ಶಿವಪ್ರಸಾದ್ ಅವರು ಮನವಿ ಮಾಡಿದ್ದಾರೆ.