ಹಿರಿಯರ ಮಾನಸಿಕ ಯೋಗಕ್ಷೇಮದ ಕುರಿತು ಸಂವಾದ ನಡೆಸಿದ ತಜ್ಞರು, ಸೆಲೆಬ್ರಿಟಿಗಳು
ಬೆಂಗಳೂರು: ವಿಶ್ವಸಂಸ್ಥೆಯ ಹಿರಿಯ ವ್ಯಕ್ತಿಗಳ ಅಂತರರಾಷ್ಟ್ರೀಯ ದಿನಾಚರಣೆ [ಯುಎನ್ಐಡಿಓಪಿ] ಹಿನ್ನೆಲೆಯಲ್ಲಿ ಹಿರಿಯರ ಮಾನಸಿಕ ಯೋಗಕ್ಷೇಮ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ 2024 (#ಎನ್ಎಸ್ಇ ಪಿಡಬ್ಲ್ಯೂ24) ಬೆಂಗಳೂರು ಇಂಟರ್‌ನ್ಯಾಶನಲ್ ನಲ್ಲಿ ಸೆಂಟರ್ ನಲ್ಲಿ ನಡೆಯಿತು. ಕರಿಸ್ತಾ ಫೌಂಡೇಶನ್ ಮತ್ತು ಸೆನಿ ಇಂಡಿಯಾ (ಟಿಝಡ್ಎಂಓ ಅವರ) ಆಯೋಜಿಸಿದ್ದ ಈ ಒಂದು ದಿನದ ವಿಚಾರ ಸಂಕಿರಣದಲ್ಲಿ ತಜ್ಞರು, ಪರಿಣತರು ಭಾಗವಹಿಸಿದರು. ದೇಶದ ವೃದ್ಧರು ಅನುಭವಿಸುವ ಮಾನಸಿಕ ಸವಾಲುಗಳು ಮತ್ತು ಸಾಮಾಜಿಕ ಒತ್ತಡಗಳ ಕುರಿತು ಈ ವಿಚಾರ ಸಂಕಿರಣದಲ್ಲಿ ಸಂವಾದ ನಡೆಯಿತು.
ನಗರಗಳು ಬೆಳೆದಂತೆ, ಸಮಾಜಗಳು ಬದಲಾದಂತೆ, ಯುವ ಜನತೆ ವಲಸೆ ಹೋದಂತೆ ಹಿರಿಯ ನಾಗರಿಕರು ಏಕಾಕಿ ತನದ ನೋವನ್ನು ಅನುಭವಿಸುತ್ತಾರೆ. ವೃದ್ಧರಲ್ಲಿನ ಏಕಾಕಿತನ ಈಗ ಬಹಳ ದೊಡ್ಡ ಸಮಸ್ಯೆಯಾಗಿದೆ. ಏಕಾಕಿತನ ದಿಂದ ಸಿಗರೇಟ್ ಸೇವನೆ ಹೆಚ್ಚಾಗುತ್ತದೆ ಎಂದು ವರದಿಗಳು ಹೇಳುತ್ತವೆ. ಎರಡು ಪ್ಯಾಕ್ ಸಿಗರೇಟ್ ಸೇದುವ ವ್ಯಕ್ತಿಗಳೂ ಇದ್ದಾರೆ. 2021ರ ಜನಗಣತಿಯ ಪ್ರಕಾರ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 104 ದಶಲಕ್ಷಕ್ಕೂ ಹೆಚ್ಚು ಜನರಿದ್ದಾರೆ. (ಒಟ್ಟು ಜನಸಂಖ್ಯೆಯ ಸುಮಾರು 9.4%), ಈ ಸಂಖ್ಯೆಯು 2050ರ ವೇಳೆಗೆ ಗಣನೀಯವಾಗಿ ಒಟ್ಟು ಜನಸಂಖ್ಯೆಯ ಶೇ.19.6ರಷ್ಟನ್ನು ತಲುಪುವ ನಿರೀಕ್ಷೆ ಇದೆ. ಹಾಗಾಗಿ ವಿಚಾರಣ ಸಂಕಿರಣ ದಲ್ಲಿ ವೃದ್ಧರ ಮಾನಸಿಕ ಆರೋಗ್ಯ ಕಾಪಾಡುವ ಕುರಿತು ಅನೇಕ ವಿಚಾರಗಳ ಚರ್ಚೆ ನಡೆಯಿತು. ಅಗತ್ಯ ಇರುವ ಸರ್ಕಾರಿ ನೀತಿಗಳು, ಹೊಸ ಆಲೋಚನೆಗಳು, ನೀತಿಗಳು, ಸಹಾನುಭೂತಿಯ ಕ್ರಮಗಳ ಕುರಿತು ಸಂವಾದ ನಡೆಯಿತು.
ಈ ಕುರಿತು ಮಾತನಾಡಿದ ಕ್ರಿಕೆಟಿಗ ಪದ್ಮಶ್ರೀ ಡಾ. ಸೈಯದ್ ಎಂ.ಎಚ್. ಕಿರ್ಮಾನಿ ಅವರು, “ನೀವು ಸೆಲ್ಫ್ ಮೇಡ್ ಆಗಿರಬಹುದು, ಆದರೆ ನಿಮ್ಮ ತಂದೆ ತಾಯಿಯ ನಿಸ್ವಾರ್ಥ ಪ್ರೀತಿ, ಬೆಂಬಲವಿಲ್ಲದೆ ಬೆಳೆದಿಲ್ಲ. ನನ್ನ ತಾರುಣ್ಯದಲ್ಲಿ ನಾನು ಸಾಕಷ್ಟು ಸಾಧನೆ ಮಾಡಿದ್ದೇನೆ. ಈಗ ಹಿರಿಯ ವಯಸ್ಸಿನ ಜೀವಗಳಿಗೆ ಒಂದು ಒಳ್ಳೆಯ ವ್ಯವಸ್ಥೆ ರೂಪಿಸು ವುದು ಎಷ್ಟು ಮುಖ್ಯ ಎಂದು ಅರ್ಥ ಮಾಡಿಕೊಂಡಿದ್ದೇನೆ. ನಿಮ್ಮ ಪೋಷಕರು ನಿಮ್ಮ ಜೀವನದಲ್ಲಿ ಅವಶ್ಯವಾಗಿ ಬೇಕು. ಅವರಿಗೆ ಕೃತಜ್ಞರಾಗಿರುವುದು ಮತ್ತು ಅವರು ಆರಾಮವಾಗಿ ಇರುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ.
ನಮ್ಮ ಹಿರಿಯರಿಗೆ ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬೆಂಬಲವನ್ನು ಒದಗಿಸಲು ನಾವು ಒಂದಾಗಬೇಕು ಮತ್ತು ಅದಕ್ಕೆ ಪೂರಕವಾದ ನೀತಿಗಳನ್ನು ರೂಪಿಸಬೇಕು. ಅವರಿಗೆ ಒಂಟಿತನ ಕಾಡುವಂತೆ ಮಾಡಬಾರದು. ಇಂಥದ್ದೊಂದು ಮಹತ್ವದ ಕಾರ್ಯವನ್ನು ಮಾಡುತ್ತಿರುವ ಚರಿಸ್ಟಾ ಫೌಂಡೇಶನ್‌ಗೆ ಅಭಿನಂದನೆ ಮತ್ತು ಕೃತಜ್ಞತೆ. ಇದೊಂದು ಮಾನವೀಯತೆಗೆ ಮಾಡುವ ದೊಡ್ಡ ಸೇವೆಯಾಗಿದೆ” ಎಂದು ಹೇಳಿದರು.
ಕಿರ್ಲೋಸ್ಕರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ಶ್ರೀಮತಿ ಗೀತಾಂಜಲಿ ಕಿರ್ಲೋಸ್ಕರ್ ಅವರು, “ಸಹಾನುಭೂತಿ ಅನ್ನುವುದು ಕೇವಲ ಪದವಲ್ಲ, ಅದು ನಾವು ನಮ್ಮ ಹಿರಿಯರಿಗೆ ತೋರಿಸಬೇಕಾದ ಪ್ರೀತಿಯ ಅಡಿಪಾಯ. ವೃದ್ಧರು ಅನ್ನುವುದರಿಂದ ಅವರಿಗೆ ವಯಸ್ಸಾಗಿದೆ ಎಂಬುದು ಮಾತ್ರ ಅರ್ಥವಲ್ಲ. ಅವರು ಕಥೆ ಗಳನ್ನು ಹೊಂದಿರುವ, ಭಾವನೆಗಳನ್ನು ಇಟ್ಟುಕೊಂಡಿರುವ ಮತ್ತು ಸೇವೆಯ ಅಗತ್ಯ ಇರುವ ಜೀವಗಳು ಎಂಬು ದನ್ನು ನಾವು ಸಾಮಾನ್ಯವಾಗಿ ಮರೆತುಬಿಡುತ್ತೇವೆ.
ನೀತಿಗಳನ್ನು ಮಾಡಿದರೆ ಮಾತ್ರ ಸಾಕಾಗುವುದಿಲ್ಲ, ಹಿರಿಯ ಜೀವಗಳಿಗೆ ಅವರ ಮಾತುಗಳನ್ನು ಕೇಳಲ್ಪಡುವ, ಅವರನ್ನು ಗೌರವಿಸಲ್ಪಡುವ ವಾತಾವರಣವನ್ನು ಒದಗಿಸಬೇಕು. ಕುಟುಂಬದ ಬೆಂಬಲ, ಕಾರ್ಪೊರೇಟ್ ಜವಾಬ್ದಾರಿ ಕಾರ್ಯಕ್ರಮಗಳು ಮತ್ತು ಸರ್ಕಾರದ ನೀತಿಗಳ ಮೂಲಕ ಸಹಾನುಭೂತಿಯ ಜಗತ್ತನ್ನು ಸೃಷ್ಟಿಸಬೇಕು. ಎನ್ಎಸ್ಇ ಪಿಡಬ್ಲ್ಯೂ 2024ನಂತಹ ಕಾರ್ಯಕ್ರಮದ ಮೂಲಕ ನಾವು ಸಹಾನುಭೂತಿ ಮತ್ತು ಕಾಳಜಿಯುಳ್ಳ ಸಮಾಜವನ್ನು ರೂಪಿಸುವ ಕುರಿತು ಸಂವಾದ ನಡೆಸಬೇಕು. ಎಲ್ಲರೂ ಒಟ್ಟು ಸೇರಿ ನಾವು ವೃದ್ಧಾಪ್ಯವನ್ನು ಘನತೆ ಮತ್ತು ಗೌರವ ದಿಂದ ಸ್ವೀಕರಿಸುವ ಜಗತ್ತನ್ನು ರಚಿಸಬಹುದು” ಎಂದು ಹೇಳಿದರು.
ನಿಮ್ಹಾನ್ಸ್ ನ ಸೆಂಟರ್ ಫಾರ್ ಕಾನ್ಶಿಯಸ್ ನೆಸ್ ನ ಸೀನಿಯರ್ ರಿಸರ್ಚ್ ಫೆಲೋ ಡಾ.ಸಾಕೇತ್ ಎಂ. ಧ್ಯಾನದ ಸಕಾರಾತ್ಮಕ ಪರಿಣಾಮಗಳ ಕುರಿತು ಮಾತನಾಡಿದರು.
ಕರಿಸ್ತಾ ಫೌಂಡೇಶನ್ ನ ಮ್ಯಾನೇಜಿಂಗ್ ಟ್ರಸ್ಟಿ ಅನಿಲ್ ಕುಮಾರ್ ಪಿ. ಅವರು, “ಈ ಪ್ರಯಾಣದಲ್ಲಿ ನಮಗೆ ಬದಲಾವ ಣೆಗೆ ಕೈಜೋಡಿಸುವ ಮನಸ್ಥಿತಿಯ ಬದ್ಧತೆ ಮತ್ತು ಸಾಮಾಜಿಕ ಪ್ರಜ್ಞೆಯುಳ್ಳ ವ್ಯಕ್ತಿಗಳು ಮತ್ತು ಸಂಸ್ಥೆಗಳ ಸಹಯೋಗದ ಅಗತ್ಯವಿದೆ. ಉತ್ತಮ ಭವಿಷ್ಯವನ್ನು ರೂಪಿಸಲು ಸಹಾಯ ಮಾಡಲು ಸಾವಿರಾರು ಕೈಗಳು ಒಟ್ಟಾಗಿ ಸೇರಬೇಕು ಮತ್ತು ‘ಹಿರಿಯರಿಗಾಗಿ ಸಚಿವಾಲಯ’ವನ್ನು ಸೃಷ್ಟಿಸಲು ಪ್ರಭಾವ ಬೀರಬೇಕು. ನಮ್ಮ ಹಿರಿಯ ನಾಗರಿಕ ರಿಗೆ ಉತ್ತಮವಾದ ಭಾರತವನ್ನು ರಚಿಸಲು, ಅವರ ಸಮಸ್ಯೆಯನ್ನು ಪರಿಹರಿಸಲು ಮತ್ತು ಅವರಿಗೆ ಸೂಕ್ತ ಪರಿಹಾರಗಳನ್ನು ಒದಗಿಸಲು ಇದು ಸೂಕ್ತ ಸಮಯವಾಗಿದೆ” ಎಂದು ಹೇಳಿದರು.
ಸಹ-ಸಂಸ್ಥಾಪಕ ಟ್ರಸ್ಟಿ ಆಗಿರುವ ಶಿಲ್ಪಿ ದಾಸ್ ಅವರು, “ನಾನು ದೀರ್ಘಕಾಲ ಬದುಕುವುದಾದರೆ ಇನ್ನೊಂದು ದಶಕದವರೆಗೆ ಹಿರಿಯ ನಾಗರಿಕರ ಟ್ಯಾಗ್ ಇಲ್ಲದೆ ಬದುಕಬಹುದು. ಆದರೆ ಜೀವನವು ನಮ್ಮನ್ನು ಹೇಗೆ ನಡೆಸಿ ಕೊಳ್ಳುತ್ತದೆ ಎಂದು ಯಾರಿಗೆ ಗೊತ್ತು? ನನಗೆ ಒಂದಂತೂ ಸ್ಪಷ್ಟವಿದೆ. ನಾನು ಅಳುವುದಕ್ಕೆ, ಕೊರಗುವುದಕ್ಕೆ, ದೂರುವುದಕ್ಕೆ, ಕೋಪಿಸಿಕೊಂಡಿರುವುದಕ್ಕೆ ಇಚ್ಛೆ ಪಡುವುದಿಲ್ಲ. ನಾನು ಯಾರೂ ಕದಿಯಲು ಸಾಧ್ಯವಾಗದ ಆನಂದಕರ ಸ್ಥಿತಿಯನ್ನು ಹೊಂದಬೇಕಾದರೆ ಇವತ್ತೇ ಅದಕ್ಕೆ ಪೂರಕವಾದ ಆಯ್ಕೆಗಳನ್ನು ಮಾಡಬೇಕು. ಈ ಪ್ರಯಾಣದಲ್ಲಿ ಹೊರಗಿನ ಸಹಾಯ ನನಗೆ ದೊರಕವುದೇ? ಯಾಕೆಂದರೆ ಇವತ್ತು ಸಾಮಾಜಿಕ ಸಹಾನುಭೂತಿ ಬಹಳ ಅಪರೂಪವಾಗಿದೆ” ಎಂದು ಹೇಳಿದರು.
ವಿಚಾರ ಸಂಕಿರಣದಲ್ಲಿ ಡಿಮೆನ್ಶಿಯಾ ಅಲಯನ್ಸ್ ಇಂಡಿಯಾದ ಅಧ್ಯಕ್ಷರು, ನೈಟಿಂಗೇಲ್ಸ್ ಸೆಂಟರ್ ಫಾರ್ ಏಜಿಂಗ್ ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರಾಧಾ ಎಸ್. ಮೂರ್ತಿ, ಕೋವೈಕೇರ್ ರಿಟೈರ್ಮೆಂಟ್ ಹೋಮ್ಸ್ ನ ವ್ಯವಸ್ಥಾಪಕ ನಿರ್ದೇಶಕ ಕರ್ನಲ್. ಅಚಲ್ ಶ್ರೀಧರನ್, ಪಬ್ಲಿಕ್ ಪಾಲಿಸಿ ಅನಾಲಿಸ್ಟ್ ಪ್ರೊ. ಅಜಿತ್ ಮಣಿ, ಶಿಕ್ಷಣ ತಜ್ಞೆ ಡಾ. ಮಂಜುಳಾ ರಾಮನ್, ಸಿನಿಮಾ ನಿರ್ದೇಶಕ- ಬರಹಗಾರ ಶ್ರೀ ಬಾಲಚಂದರ್ ಗಾಂಡೇಕರ್, ಮತ್ತು ಥಿಯೇಟರ್ ಫಾರ್ ಚೇಂಜ್ ನ ಸಂಸ್ಥಾಪಕಿ ಶ್ರೀಮತಿ ಸುಜಾತಾ ಬಾಲಕೃಷ್ಣ ಇದ್ದರು.