Tuesday, 23rd April 2024

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್’ಗೆ ಕರ್ನಾಟಕ ಬಂಜಾರ ಜಾಗೃತಿ ದಳ ಸಂಘಟನೆ ತರಾಟೆ

ಸದಾಶಿವ ಆಯೋಗ ಜಾರಿ ಹೇಳಿಕೆ

ತುಮಕೂರು : ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ಪಕ್ಷ ಬೆಂಬಲಿಸುತ್ತದೆ ಹಾಗೂ ಜಾರಿ ಮಾಡು ತ್ತದೆ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರನ್ನು ಕರ್ನಾಟಕ ಬಂಜಾರ ಜಾಗೃತಿ ದಳ ಹಾಗೂ ಕರ್ನಾಟಕ ಬಂಜಾರ ಮಹಿಳಾ ಮಹಾ ಸಭಾ ಸಂಘಟನೆ ತರಾಟೆಗೆ ತೆಗೆದುಕೊಂಡಿದೆ.

ಈ ಬಗ್ಗೆ ಸಮುದಾಯದ ತಿಪ್ಪ ಸರ್ ನಾಯ್ಕ್ ರಾಜ್ಯಾಧ್ಯಕ್ಷರು ಹಾಗೂ ಮೀಟ್ಯಾನಾಯ್ಕ ಬಿ. ಹೆಚ್ ಕರ್ನಾಟಕ ಬಂಜಾರ ಜಾಗೃತಿ ದಳ ಮಾತಾನಾಡಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರ ಹೇಳಿಕೆಯು ಹಾಸ್ಯಾಸ್ಪದದಿಂದ ಕೂಡಿದು ಗಾಳಿ ಬಿಸುವ ಕಡೆ ಕೊಡೆಹಿಡಿಯುವ ಬುದ್ದಿ ಬಿಡಬೇಕು ಎಂದು ನಳೀನ್ ಕುಮಾರ್ ಕಟೀಲ್ ರನ್ನು ಎಚ್ಚರಿಸಿದು ಕೂಡಲೇ ಹೇಳಿಕೆ ಹಿಂಪಡೆಯುವಂತೆ ಮುಖಂಡರು ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಬಿಜೆಪಿ ಪಕ್ಷ 2004 2008 ಹಾಗೂ 2013 ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಪರಿಶಿಷ್ಟ ಜಾತಿಯಲ್ಲಿನ ಸ್ಪೃಶ್ಯ ಜನಾಂಗಗಳ ಮತಗಳು ಬೇಕಾಗಿತ್ತು , ಈಗ ಈ ಜಾತಿಗಳನ್ನು ತುಳಿಯಲು ಬಿಜೆಪಿ ಮುಂದಾಗಿರುವುದು ದುರಂತದ ಸಂಗತಿ ಎಂದಿದ್ದಾರೆ.

2008ರ ಚುನಾವಣೆಯಲ್ಲಿ ಭೋವಿ ಸಮುದಾಯದ ಶಾಸಕರು ಗೆದ್ದು ಯಡ್ಡಿಯೂರಪ್ಪ ರಿಗೆ ಬೆಂಬಲ ನೀಡಿಲಿಲ್ಲವೆಂದರೆ ಯಡ್ಡಿಯೂರಪ್ಪ ಮುಖ್ಯಮಂತ್ರಿ ಗಳು ಆಗಲು ಸಾಧ್ಯವಾಗುತ್ತಿತೆ ಎಂದು ಪ್ರಶ್ನೆ ಮಾಡಿದ್ದಾರೆ.ಬಿಜೆಪಿ ಆರ್ ಎಸ್ ಎಸ್ ಪರಿಶಿಷ್ಟ ರಲ್ಲಿ ಒಡಕು ಉಂಟು ಮಾಡಲು ಸದಾಶಿವ ಆಯೋಗದ ವರದಿ ಜಾರಿ ಎಂಬ ಅಸ್ತ್ರ ಬಳಸುತ್ತಿರುವುದು ವಿಪರ್ಯಾಸದ ಸಂಗತಿ . ಈ ಬಾರಿ ಸಿರಾ, ಆರ್ ಅರ್ ನಗರ ಉಪಚುನಾವಣೆಯಲ್ಲಿ ಕೊರಚ,ಕೊರಮ,ಲಂಬಾಣಿ, ಭೋವಿ ಸಮುದಾಯ ತಕ್ಕ ಪಾಠ ಕಲಿಸುತ್ತದೆ ಎಂದು ಹೇಳಿದ್ದಾರೆ.

ಚುನಾವಣಾ ಸಮಯದಲ್ಲಿ ಹೆಚ್ಚು ಜನಸಂಖ್ಯೆ ಇರುವ ಸಮುದಾಯಗಳನ್ನು ಒಲೈಸುವ ತಂತ್ರಗಾರಿಕೆಗೆ ಬಿಜೆಪಿಯು ಒಳಗಾದರೆ ಪರಿಶಿಷ್ಟರ 99 ಜಾತಿಗಳ ವಿರೋಧವನ್ನು ಎದುರಿಸಬೇಕಾಗುತ್ತದೆ.

ಚುನಾವಣಾ ಸಮಯದಲ್ಲಿ ಭಾವನಾತ್ಮಕ ವಿಚಾರಗಳ ಮೇಲೆ ಮತಗಳನ್ನು ಕೇಳುವ ಬದಲು ಬಿಜೆಪಿ ಪಕ್ಷ ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ,ಉದ್ಯೋಗ ಸೃಷ್ಟಿ, ರೈತರ ಸಮಸ್ಯೆ, ನೀರಾವರಿ, ಪ್ರವಾಹದ ವಿಚಾರದಲ್ಲಿ ನಳೀನ್ ಕುಮಾರ್ ಕಟೀಲ್ ರ ಪಕ್ಷದ ಸಾಧನೆ ಬಗ್ಗೆ ಹೇಳಿ ಮತ ಕೇಳಲಿ ಎಂದು ತಿರುಗೇಟು ನೀಡಿದ್ದಾರೆ .

Leave a Reply

Your email address will not be published. Required fields are marked *

error: Content is protected !!