Friday, 13th December 2024

ಮುದ್ದಿನ ಗಿಣಿ ಸಿಕ್ಕಿತು: ನಗದು ಬಹುಮಾನ ದೊರೆಯಿತು

ತುಮಕೂರು: ಮನೆಯಿಂದ ಕಾಣೆಯಾಗಿದ್ದ ಗಿಣಿ ಪತ್ತೆ ಮಾಡಿಕೊಟ್ಟವರಿಗೆ ಮಾಲೀಕ ನಗದು ಬಹುಮಾನ ನೀಡಿದ ಪ್ರಸಂಗ ನಡೆಯಿತು.
ತುಮಕೂರಿನ‌ ಜಯನಗರ ನಿವಾಸಿ ಅರ್ಜುನ್ ಮನೆಯಲ್ಲಿ ಬೂದುಬಣ್ಣದ ಗಿಣಿಯನ್ನು ಸಾಕಿದ್ದರು. ಅದು ಆಕಸ್ಮಿಕವಾಗಿ ಮನೆಯಿಂದ ಕಾಣೆಯಾಗಿತ್ತು. ಎರಡ್ಮೂರು ದಿನ ಹುಡುಕಿದರೂ ಸಿಕ್ಕಿರಲಿಲ್ಲ.
ನಂತರ ಗಿಣಿ ಹುಡುಕಿಕೊಟ್ಟವರಿಗೆ 50 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ನಗರದ ತುಂಬಾ ಪೋಸ್ಟರ್ ಅಂಟಿಸಿದ್ದರು. ವೈರಲ್ ಸಹ ಆಗಿತ್ತು. ಜಾಹೀರಾತು ನೀಡಿದರೂ ಗಿಣಿ ಸಿಗಲಿಲ್ಲ. ಜ್ಯೋತಿಷಿಯೊಬ್ಬರ ಮೊರೆ ಹೋದಾಗ ಬಹುಮಾನವನ್ನು 85 ಸಾವಿರಕ್ಕೆ ಏರಿಕೆ ಮಾಡಲು ಸಲಹೆ ನೀಡಿದರು.
ನಂತರ ಕ್ಯಾತ್ಸಂದ್ರದ ತೋಟವೊಂದರಲ್ಲಿ ಗಿಣಿ ಸಿಕ್ಕಿತು. ಅವರು  ಮಾಲೀಕರಿಗೆ ಕರೆ ಮಾಡಿ ಸಂಪರ್ಕಸಿ ಗಿಣಿಯನ್ನು ತಂದು ಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ಅರ್ಜುನ್ ಕುಟುಂಬದವರು ಗಿಣಿ ತಂದುಕೊಟ್ಟವರಿಗೆ ಸ್ಥಳದಲ್ಲಿಯೇ 85 ಸಾವಿರ ಬಹುಮಾನ ನೀಡಿದರು.
ಮನೆ ಮಕ್ಕಳಂತೆ ಗಿಣಿ ಸಾಕಿದ್ದೆವು. ಅದು ಕಾಣೆಯಾದಾಗ ಮನೆಮಂದಿಯೆಲ್ಲಾ ಆತಂಕಪಟ್ಟಿದ್ದೆವು. ಅದು ಮರಳಿ ಸಿಕ್ಕಿರುವುದು ಸಂತಸ ಮೂಡಿಸಿದೆ. ಪ್ರೀತಿಯ ಮುಂದೆ 85 ಸಾವಿರ ಹಣ ಮುಖ್ಯವಲ್ಲ ಎಂದು ಅರ್ಜುನ್ ಸಂತಸಪಟ್ಟರು.