Tuesday, 16th April 2024

ಕನ್ನಮೇಡಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೈರು ಹಾಜರಿ, ಅಭಿವೃದ್ಧಿ ಕುಂಠಿತ

ಸದಸ್ಯರಿಗೆ ಕಡೆಗಣಿನೆ ಸದಸ್ಯರ ಅರೋಪ

ಪಾವಗಡ: ತಾಲೂಕಿನ ಕನ್ನಮೇಡಿ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಂಚಾಯತಿ ಸದಸ್ಯರ ಮಾತಿಗೆ ಹಾಗೂ ಸರಿಯಾಗಿ ಕೆಲಸಕ್ಕೆ ಬಾರದೆ ಅಭಿವೃದ್ಧಿ ಕುಂಟಿತಕೋಡಿದೆ ಎಂದು ಸದಸ್ಯರು ಆರೋಪಿಸಿದ್ದಾರೆ.

ಪಿಡಿಓ ಸದಸ್ಯರಿಗೆ ಗಣನೆಗೆ ತೆಗೆದುಕೋಳ್ಳದೆ ಏಕ ಪಕ್ಷಿಯವಾಗಿ ನಡೆದು ಕೊಳ್ಳುತ್ತಿದ್ದಾರೆ ಯಾವುದೇ ವಿಚಾರಗಳಿಗೆ ಸ್ಪಂದಿಸುತ್ತಿಲ್ಲ. ಕಚೇರಿಗೆ ಸರಿಯಾಗಿ ಬಾರದ ಕಾರಣ ಪಂಚಾಯತಿಯಲ್ಲಿ ಸಮಸ್ಯೆಗಳು ಹೆಚ್ಚಾಗಿವೆ.

15ನೇ ಹಣಕಾಸಿನ ಯೋಜನೆಯಲ್ಲಿ ಬಾರಿ ಅವ್ಯವಹಾರ ನಡೆದಿದೆ ಇದರ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ಕೇಳಿದರೆ ನೀಡದೆ ಏಕ ಪಕ್ಷವಾಗಿ ನಡೆದುಕೊಳ್ಳುತ್ತಿದ್ದಾರೆ.

ಮನೆಗಳ ಪಟ್ಟಿಯ ವಿಚಾರದಲ್ಲಿ ತಾಲೂಕಿನ ಎಲ್ಲಾ ಪಂಚಾಯತಿ ಗಳು ಮಾಹಿತಿ ನೀಡಿದ್ದಾರೆ ಅದರೆ ನಮ್ಮ ಪಂಚಾಯತಿಯಲ್ಲಿ ಇಲ್ಲಿಯವರೆಗೆ ಪಟ್ಟಿ ಸಿದ್ದ ಮಾಡಿಲ್ಲ ಎಂದರೆ ಇಲ್ಲಿನ ಅಧಿಕಾರಿಗಳು ಯಾವ ರೀತಿಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ.

ಸಾಲ ಪಾಲ ಮಾಡಿ ಕೆಲಸ ಮಾಡಿದ ಸಾರ್ವಜನಿಕರಿಗೆ ಕಳೆದ ಆರು ತಿಂಗಳಿಂದ ಬಿಲ್ಲುಗಳನ್ನು ಮಾಡದೆ ಸತಾಯಿಸುತ್ತಿದ್ದಾರೆ.

ಪ್ರತಿ ದಿನ ಕೆಲಸ ಮಾಡಿರುವ ಸಾರ್ವಜನಿಕರು ಕೇಚೆರಿಗೆ ಅಲೆದಾಡುಸುತ್ತಿದ್ದಾರೆ ಎಂಬುದಾಗಿ ಅರೋಪಗಳು ಮಾಡಿದ್ದಾರೆ.

ಸದಸ್ಯರು ಪಿಡಿಓ ಗೆ ದೂರವಾಣಿ ಮೂಲಕ ಕರೆ ಮಾಡಿದರು ಸ್ಪಂದಿಸುತ್ತಿಲ್ಲ. ಇಲ್ಲಿಯವರೆಗೆ ಪಂಚಾಯತಿಗೆ ಎಷ್ಟು ಅನುಧಾನ ಬಂದಿದೆ ಏನು ಎಂಬುದು ಮಾಹಿತಿ ಸದಸ್ಯರಿಗೆ ನೀಡುತ್ತಿಲ್ಲ.

ಈ ಪಂಚಾಯತಿಯಲ್ಲಿ ಬಾರಿ ಅವ್ಯವಹಾರ ನಡೆದಿದೆ ಸಂಬಂಧ ಪಟ್ಟ ಅದೀಕಾರಿಗಳು ತನಿಖಾ ನಡೆಸಬೇಕು ಎಂಬುದಾಗಿ ಸದಸ್ಯರು ಆರೋಪಿಸಿದ್ದಾರೆ. ಈ ಹಿಂದಿನ ಸದಸ್ಯರು ಸಹ ಈ ಪಂಚಾಯತಿಯಲ್ಲಿ ಬಾರಿ ಅವ್ಯವಹರ ನಡೆದಿದೆ ಎಂಬುದಾಗಿ ಆರೋಪಿಸಿದ್ದರು.

ಈ ವೇಳೆ ಸದಸ್ಯರಾದ ನರಸಿಂಹಯ್ಯ. ಮಾತನಾಡಿ ಈ ಪಂಚಾಯತಿಯಲ್ಲಿ ಒಟ್ಟು ಇಪ್ಪತ್ತು ಸದಸ್ಯರು ಇದ್ದಾರೆ ಅದರೆ ಪಿಡಿಓ ರಾಘವೇಂದ್ರ ರವರಿಗೆ ಹಲವು ಬಾರಿ ಯಾವುದೇ ವಿಚಾರವಾಗಿ ಸದಸ್ಯರಿಗೆ ಸ್ಪಂದಿಸುತ್ತಿಲ್ಲಾ ಯಾವುದೇ ಮಾಹಿತಿ ಕೆಳಿದರು ನೀಡುತ್ತೀಲ್ಲ ಇವರ ಬಗ್ಗೆ ಈಗಾಗಲೇ ತಾಲೂಕು ಪಂಚಾತಿ ಇಓ.ಹಾಗೂ ಸ್ಥಳೀಯ ಶಾಸಕ ಗಮನಕ್ಕೂ ತರಲಾಗಿದೆ.ಜಿಲ್ಲಾ .ಸಿ.ಇ.ಓ ಮೇಡಂ ರವರಿಗೂ ಗಮನಕ್ಕೆ ತಂದರೂ ಇನ್ನೂ ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಈ ವೇಳೆ ಸದಸ್ಯರಾದ ವೆಂಕಟಲಕ್ಷಮ್ಮ, ಸರೋಜಮ್ಮ, ಗೌರಮ್ಮ, ಪ್ರಾಸದ್.ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ನಾಗೇಂದ್ರ. ಮಾಜಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯ ಶಿವಮೂರ್ತಿ.ದೇವರಾಯಪಾಳ್ಯ ನಾಗೇಂದ್ರ. ಪ್ರಸಾದ್.ಹಾಗೂ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

***
ಹದಿನೈದನೇ ಹಣಕಾಸಿನ ಯೋಜನೆ ಯಾವುದೇ ಕಾಮಗಾರಿ ಮಾಡಿರುವ ಬಗ್ಗೆ ಜಿಲ್ಲಾ ಪಂಚಾಯತ ಇಂಜಿನಿಯರ್ ವಿಕ್ಷಣೆ ಮಾಡಿದ ನಂತರ ಬಿಲ್ಲು ಮಾಡಲು ಅವಕಾಶ ಇರುತ್ತದೆ ಎಂದರು.ಪ್ರತಿ ದಿನ ನಾನು ಕರ್ತವ್ಯಕ್ಕೆ ಬರುತ್ತಿದಗದೇನೆ.ನನ್ನ ಮೇಲೆ ಸದಸ್ಯರು ಸುಳ್ಳು ಆರೋಪಗಳನ್ನು ಮಾಡಲಾಗಿದೆ.
ಕನ್ನಮೇಡಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ.

 

error: Content is protected !!