Friday, 13th December 2024

ಪಾವನಿಕುಮಾರ್‌ಗೆ ‘ವಿಶೇಷ ಪ್ರತಿಭೆ’ ಪ್ರಶಸ್ತಿ ಪ್ರದಾನ

ಚಿಂತಾಮಣಿ: ಬೆಂಗಳೂರಿನ ಗಾಂಧಿನಗರದ ನಗರೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಗರ್ತ ಮಹಿಳಾ ಸಂಘದಿಂದ ಮಕ್ಕಳ ಸಾಂಸ್ಕೃತಿಕ ಮೇಳ ಹಾಗೂ ಸಮುದಾಯದ ಬಾಲ ಪ್ರತಿಭೆಗಳಿಗೆ ಪ್ರಶಸ್ತಿ ಪ್ರದಾನ, ಅಭಿನಂದನೆ ಸಮಾರಂಭ ಭಾನುವಾರ ನಡೆಯಿತು.

ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು. ಇದೇ ವೇಳೆ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದ ಬಿ.ಕುಮಾರ್-ಎಂ.ರೂಪ ದಂಪತಿಯ ಪುತ್ರಿ ಪಾವನಿ ಕುಮಾರ್ ಅವರಿಗೆ ‘ವಿಶೇಷ ಪ್ರತಿಭೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಾಲ ಪ್ರತಿಭೆಯ ಪರಿಚಯ: ಚಿಂತಾಮಣಿಯ ಜೈನ್ ಪಬ್ಲಿಕ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಪಾವನಿಕುಮಾರ್ 6ನೇ ವಯಸಿನಿಂದಲೇ ಕೈವಾರದ ನಾಟ್ಯಾಂಜಲಿ ನೃತ್ಯ ಕಲಾ ಅಕಾಡೆಮಿಯ ಗುರುಗಳಾದ ಪರಿಮಳ ಅರಳು ಮಲ್ಲಿಗೆ ಅವರ ಬಳಿ ಭರತನಾಟ್ಯ ಮತ್ತು ಶ್ರೀ ಯೋಗಿ ನಾರೇಯಣ ಸಂಗೀತ ಕಲೆ ಎಜುಕೇಷನ್ ಟ್ರಸ್ಟ್ ನಲ್ಲಿ ಗುರುಗಳಾದ ವಿಜಯಲಕ್ಷ್ಮೀ ಅವರ ಬಳಿ ಸಂಗೀತ ಕಲಿಯುತ್ತಿದ್ದಾರೆ.

ರಾಜ್ಯದ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯದಲ್ಲೂ ತಂಡದೊಂದಿಗೆ ಹಾಗೂ ವೈಯಕ್ತಿಕವಾಗಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಕೈವಾರದ ಸಂಗೀತೋತ್ಸವ, ಉಡುಪಿಯ ಶ್ರೀ ಕೃಷ್ಣನ ಸನ್ನಿಧಿಯಲ್ಲಿ, ಗೋವಾದ ಮಡಗಾಂವ್ನ ಗೋಮತಿ ಆಡಿಟೋರಿಯಂನಲ್ಲಿ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಚಿವಾಲಯ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಸಾಂಸ್ಕೃತಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಓಂಕಾರ್ ಫೆಸ್ಟಿವಲ್ ಆಫ್ ಡ್ಯಾನ್‌ಸ್‌, ತಮಿಳುನಾಡಿನ ಪ್ರಸಿದ್ಧ ಮಧುರೈ ಮೀನಾಕ್ಷಿ ದೇವಾಲಯದ ಸಭಾಂಗಣದಲ್ಲಿ ನಾಟ್ಯ ಸಮರ್ಪಣೆ. ಭಾರತೀಯ ಶಾಸ್ತ್ರೀಯ ನೃತ್ಯ ಹಬ್ಬ, ಬೆಂಗಳೂರಿನ ಜ್ಞಾನಭಾರತಿ ಕಲಾಗ್ರಾಮದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೆಜ್ಜೆ-ಗೆಜ್ಜೆ ಸೇರಿದಂತೆ ಇನ್ನಿತರ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಾವನಿಕುಮಾರ್ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ.

‘ನವ ನಕ್ಷತ್ರ ಪುರಸ್ಕಾರ’ ಸೇರಿದಂತೆ ಇನ್ನಿತರ ಪ್ರಶಸ್ತಿಗೆ ಭಾಜನರಾಗಿದ್ದಾಾರೆ.