Friday, 1st December 2023

ಕಾವೇರಿ ಹಿತರಕ್ಷಣಾ ಸಮಿತಿ ಪ್ರತಿಭಟನೆ: ಕನಕಪುರದ ಮೇಕೆದಾಟು ಪ್ರದೇಶಕ್ಕೆ ಭದ್ರತೆ

ರಾಮನಗರ: ತಮಿಳುನಾಡಿನ ಕಾವೇರಿ ಹಿತರಕ್ಷಣಾ ಸಮಿತಿ ಸದಸ್ಯರ‌ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಕನಕಪುರದ ಮೇಕೆದಾಟು ಹಾಗೂ ಸುತ್ತಲಿನ ಪ್ರದೇಶಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಮೇಕೆದಾಟು ಅಣೆಕಟ್ಟೆ ನಿರ್ಮಾಣ ವಿರೋಧಿಸಿ ತಮಿಳುನಾಡು ಕಾವೇರಿ ಹಿತರಕ್ಷಣ ಸಮಿತಿ ಪ್ರಧಾನ ಕಾರ್ಯದರ್ಶಿ ಪಾಂಡೇ ಯನ್ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ಮೇಕೆದಾಟಿನತ್ತ ಹೊರಟಿದ್ದ ಅವರನ್ನು ತಮಿಳುನಾಡು ಪೊಲೀಸರು ತಂಜಾವೂರಿನಲ್ಲಿ ಬಂಧಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮೇಕೆದಾಟು‌ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಕಾವಲಿದ್ದು, ಪ್ರತಿ ವಾಹನವನ್ನು ತಪಾಸಣೆ ಮಾಡಿ ಒಳಬಿಡಲಾಗುತ್ತಿದೆ.

ಚನ್ನಪಟ್ಟಣ ಡಿವೈಎಸ್ಪಿ‌ ನೇತೃತ್ವದಲ್ಲಿ 5 ಇನ್ ಸ್ಪೆಕ್ಟರ್, 12 ಎಸ್ ಐ, 25 ಎಎಸ್ ಐ ಹಾಗೂ 106 ಕಾನ್ ಸ್ಟೆಬಲ್ ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!