Wednesday, 24th April 2024

ತಾಲ್ಲೂಕು ಕಚೇರಿಯಲ್ಲಿ ಮತದಾನ ಕೇಂದ್ರ ತೆರೆದಿರುವುದಕ್ಕೆ ಆಕ್ಷೇಪ

ಚಿಕ್ಕನಾಯಕನಹಳ್ಳಿ: ಆಗ್ನೇಯ ಪದವೀಧರ ಕ್ಷೇತ್ರದ ಮತ ಕೇಂದ್ರವನ್ನು ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತೆರೆದಿ ರುವುದರಿಂದ ಸಾರ್ವಜನಿಕ ಕೆಲಸಗಳಿಗೆ ತೊಂದರೆ ಉಂಟಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಾಜಿ ಜಿಲ್ಲಾ ಸಂಚಾಲಕ ಕಂಟಲಗೆರೆ ಸತೀಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಚುನಾವಣೆ ನಡೆಯುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ನಮ್ಮ ಅಭಿವೃದ್ದಿಗೆ ಶ್ರಮಿಸುವವರನ್ನು ನಾವೇ ಆಯ್ಕೆ ಗೊಳಿಸಲು ನಮ್ಮ ಸಂವಿಧಾನ ನೀಡಿರುವ ಹಕ್ಕಾಗಿದೆ. ಇದರ ಅನ್ವಯ ಪದವೀಧರ ಕ್ಷೇತ್ರದ ಮತದಾನವನ್ನು ತಾಲ್ಲೂಕು ಕಚೇರಿ ಯಲ್ಲಿ ನಡೆಸುವುದರಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ರೈತರು ಪಹಣಿ, ಆಹಾರ ಇಲಾಖೆ, ಸರ್ವೇ, ಪಿಂಚಣಿ, ಕಂದಾಯ ಇಲಾಖೆಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ತಾಲ್ಲೂಕು ಕಚೇರಿಗೆ ನಿತ್ಯವೂ ಎಡತಾಕುತ್ತಿರುತ್ತಾರೆ.

ಆದರೆ ಇಂತಹ ಕೆಲಸಗಳಿಂದ ಆಗುವ ಲೋಪವು ಸಾಮಾನ್ಯರಿಗೆ ತೀವ್ರ ಸಂಕಷ್ಟವನ್ನು ಈಡು ಮಾಡುತ್ತವೆ. ಮತದಾನ ಪ್ರಕ್ರಿಯೆ ಗಳಿಂದ ಸಾರ್ವಜನಿಕ ಕಾರ್ಯಗಳಿಗೆ ಅಡ್ಡಿ ಉಂಟಾಗಿದೆ. ಸಾರ್ವಜನಿಕರು ಹೆಚ್ಚಾಗಿ ಬಳಸುವ ಕಚೇರಿಗಳಲ್ಲಿ ಮತ ಕೇಂದ್ರವನ್ನು ತೆರೆಯದೆ ಶಾಲಾ ಕಾಲೇಜಿನ ಕಟ್ಟಡಗಳಲ್ಲಿ ಮತದಾನ ನಡೆಸಬೇಕು. ಇದರಿಂದ ಸಾರ್ವಜನಿಕ ಕೆಲಸಗಳು ಯಾವುದೇ ಅಡ್ಡಿ  ಇಲ್ಲದೆ ಸುಗಮವಾಗಿ ಸಾಗುತ್ತದೆ.

ಆದ್ದರಿಂದ ಚುನಾವಣೆ ಆಯೋಗ ಮತ್ತು ರಾಜ್ಯ ಸರಕಾರ ತಾಲ್ಲೂಕು ದಂಡಾಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!