ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್ ತಿಪಟೂರು ತಾಲೂಕು ಘಟಕದ ವತಿಯಿಂದ ಆಯ್ದ ಪೂಜೆಯ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯ ಕರ್ತರು ಸಾಮೂಹಿಕವಾಗಿ ತಿಪಟೂರು ತಾಲೂಕು ಕಚೇರಿಯ ಪೂಜೆ ಹಾಗೂ ಕಚೇರಿಯ ಆವರಣ ದಲ್ಲಿ ಸಂಘದ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು.
ನಂತರ ಮಾತನಾಡಿದ ತಾಲೂಕು ಯೋಜನಾಧಿಕಾರಿಯ ಉದಯ್ ಅವರು ನಮ್ಮ ಸಂಘಗಳು ರಾಜ್ಯದ ತುಂಬೆಲ್ಲ ಕಾರ್ಯನಿರ್ವಹಿಸುತ್ತಿವೆ ಆದರೆ ತಿಪಟೂರು ತಾಲೂಕಿನಲ್ಲಿ ನಡೆದಿರುವ ಕಾರ್ಯಗಳನ್ನು ಪರಿಗಣಿಸಿ ತಿಪಟೂರು ತಾಲೂಕು ರಾಜ್ಯದಲ್ಲೇ ಐದನೇ ಸ್ಥಾನಕ್ಕೆ ಆಯ್ಕೆಯಾಗಿದ್ದು, ಇದಕ್ಕೆ ಕಾರಣಕರ್ತರಾದ ನನ್ನ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಸರ್ವರಿಗೂ ಒಳಿತನ್ನು ಬಯಸಿ ಮನುಷ್ಯನ ಕಷ್ಟ ಕಾರ್ಪಣ್ಯಗಳು ದೂರ ಸರಿದು ಭಗವಂತನು ಎಲ್ಲರಿಗೂ ಸುಖ ನೆಮ್ಮದಿ ಆರೋಗ್ಯ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.