Saturday, 14th December 2024

ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ತುಮಕೂರು: ಗ್ರಾಮಾಂತರ  ಶಾಸಕ  ಡಿ.ಸಿ ಗೌರಿಶಂಕರ್ ಅವರು ಊರುಕೆರೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗೊಲ್ಲರಹಟ್ಟಿ, ಕರಲುಪಾಳ್ಯ, ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಊರುಕೆರೆ ಜಿಲ್ಲಾ ಪಂಚಾಯತಿ ಉಸ್ತುವಾರಿಗಳಾದ ಹಿರೆಹಳ್ಳಿ ಮಹೇಶ್, ಹರೀಶ್ ಎನ್ ಆರ್ ನರಸಾಪುರ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರುಗಳು ಮುಖಂಡರುಗಳು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.