Wednesday, 11th December 2024

ಬಜರಂಗದಳದಿಂದ ಮಾರಕಾಸ್ತ್ರಗಳಿಗೆ ಪೂಜೆ

ತುಮಕೂರು: ಆಯುಧ ಪೂಜೆ ಅಂಗವಾಗಿ ಬಜರಂಗದಳದಿಂದ ಮಾರಕಾಸ್ತ್ರಗಳಿಗೆ ವಿಶೇಪ ಪೂಜೆ ಸಲ್ಲಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ನಗರದ ಗಣಪತಿ ದೇವಸ್ಥಾನದಲ್ಲಿ ಆಯುಧ ಪೂಜೆಯ ದಿನದಂದು  ಏರ್ ಗನ್, ಡ್ರ‍್ಯಾಗರ್, ಲಾಂಗ್​, ಕತ್ತಿ ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನಿಟ್ಟು ಪೂಜೆ ನೆರವೇರಿಸಿದ್ದಾರೆ. ಈ ರೀತಿಯ ಮಾರಕಾಸ್ತ್ರಗಳನ್ನು ಯಾರು, ಏಕೆ? ಬಳಸುತ್ತಿದ್ದರು ಎಂಬುದು ಪ್ರಶ್ನಾರ್ಹವಾಗಿದೆ.