Friday, 2nd June 2023

26, 29, ಹಾಗು 31 ರಂದು ವಿದ್ಯುತ್ ವ್ಯತ್ಯಯ

ಚಿಕ್ಕನಾಯಕನಹಳ್ಳಿ : ಕೆಪಿಟಿಸಿಎಲ್ ದ್ವಿಪಥ ವಿದ್ಯುತ್ ಲೈನ್ ಅಳವಡಿಕೆ ಕಾಮಾಗಾರಿಯನ್ನು ಕೈಗೊಂಡಿರುವುದರಿAದ ಮೇ 26, 29 ಮತ್ತು 31 ರಂದು ಹಂದನಕೆರೆ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಬೈಲಪ್ಪನ ಮಠದ ಸಮೀಪವಿರುವ 110 ಕೆವಿ ಪ್ರಸರಣಾ ಮಾರ್ಗದಿಂದ 110/11 ಕೆವಿ ಹಂದನಕೆರೆ ಉಪಸ್ಥಾವರಕ್ಕೆ ಮತ್ತೊಂದು ಲೈನ್ ಎಳೆಯಲು ಬೆಸ್ಕಾಂ ಸಿದ್ದತೆ ನಡೆಸಿದೆ. ಈ ಹಿನ್ನಲೆಯಲ್ಲಿ ಮಲ್ಲಿಗೆರೆ ನಿರಂತರ, ಸಬ್ಬೇನಹಳ್ಳಿ ನಿರಂತರ, ರಾಮಘಟ್ಟ ನಿರಂತರ, ಕೈಮರ ನಿರಂತರ, ಪುರದಕಟ್ಟೆ, ಬರಣಾಪುರ, ಬೊಮ್ಮೇನಹಳ್ಳಿ, ಎಣ್ಣೆಗೆರೆ, ಹಂದನಕೆರೆ, ಕಾಮಾ ಲಪುರ, ಬೇವಿನಹಳ್ಳಿ, ಹರೇನಹಳ್ಳಿ, ಮತ್ತಿಘಟ್ಟ, ರಂಗೇನಹಳ್ಳಿ, ಉಪ್ಪಿನಕಟ್ಟೆ, ಸೋರಲಮಾವು ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆ. 9 ಗಂಟೆಯಿ0ದ ಸಂಜೆ 6 ರವರೆಗೆ ಮೂರು ದಿನ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

error: Content is protected !!