ತುಮಕೂರು: ನಾಡಿನಲ್ಲಿ ಕನ್ನಡಪರ ಸಂಘಟನೆಗಳು ನಾಡು ನುಡಿ ನೆಲ ಜಲ ಭಾಷೆ ಜೊತೆ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿ ನಾಡಿನ ನಿರ್ಗತಿಕರು ಬಡವರು ಶ್ರಮಿಕ ದುಡಿಯುವ ವರ್ಗಕ್ಕೆ ಆರೋಗ್ಯ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಶಾಸಕ ಜಿ ಬಿ ಜ್ಯೋತಿ ಗಣೇಶ್ ತಿಳಿಸಿದರು.
ಅಖಿಲ ಕರ್ನಾಟಕ ಕಾರ್ಮಿಕ ಪ್ರಜಾ ವೇದಿಕೆ ಆಯೋಜನೆ ಮಾಡಿದ 2ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಕನ್ನಡಪರ ಸಂಘಟನೆಗಳು ಜನಪರವಾದ ಕಾಳಜಿಗಳನ್ನು ಹೊಂದಿ ಕೇವಲ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸೀಮಿತವಾಗದೆ ಬಡ ಕಾರ್ಮಿಕರನ್ನು ಗುರುತಿಸಿ ಪ್ರತಿಷ್ಠಿತ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಸಯೋಗದೊಂದಿಗೆ ಅವರ ಆರೋಗ್ಯ ತಪಾಸಣೆ ನಡೆಸಿ ಸೂಕ್ತವಾದ ಸಲಹೆ ಚಿಕಿತ್ಸೆಗಳನ್ನು ಕೊಡಿಸಿ ಅರ್ಥಪೂರ್ಣವಾಗಿ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿರುವುದು ಶ್ಲಾಘನೀಯವೆಂದು ತಿಳಿಸಿದರು.
ಬೃಹತ್ ಆರೋಗ್ಯ ಶಿಬಿರವನ್ನು ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ , ಕಾರ್ಮಿಕ ಪ್ರಜಾ ವೇದಿಕೆ ಸಂಘಟನೆ ಮಾಡು ತ್ತಿರುವ ಕಾರ್ಯ ಇದರ ಸದುಪಯೋಗವನ್ನು ಬಡವರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅಖಿಲ ಕರ್ನಾಟಕ ಕಾರ್ಮಿಕ ಪ್ರಜಾ ವೇದಿಕೆಯ ರಾಜ್ಯ ಅಧ್ಯಕ್ಷ ಸತೀಶ್ ಜಿ ಡಿ ಮೀಸೆ ಮಾತನಾಡಿ, ಅದ್ದೂರಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಎಲ್ಲರಿಗೂ ಆರೋಗ್ಯ ಎಲ್ಲೆಡೆ ಆರೋಗ್ಯ ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಘೋಷ ವಾಕ್ಯ ದೊಂದಿಗೆ ಸುಮಾರು 200 ಬಡ ಕಾರ್ಮಿಕರಿಗೆ ಉಚಿತ ವಾಗಿ 20ಲೀ. ಸಾರ್ಮಥ್ಯದ ಕುಡಿಯುವ ನೀರಿನ ಕ್ಯಾನ್ ಗಳನ್ನ ವಿತರಣೆ ಮಾಡಲಾಗುತ್ತಿದ್ದು ಇದೇ ಸಂದರ್ಭದಲ್ಲಿ ತುಮಕೂರಿನ ಪ್ರತಿಷ್ಠಿತ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ಸುಮಾರು 60ಕ್ಕೂ ಹೆಚ್ಚು ನುರಿತ ವೈದ್ಯರು ನೂರಾರು ಬಡ ನಿರ್ಗತಿಕ ಕಾರ್ಮಿಕರಿಗೆ ಸ್ಥಳದಲ್ಲಿ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಾಕೆ ಹಾಗೂ ಔಷಧಿಗಳನ್ನ ವಿತರಣೆ ಮಾಡಿದ್ದು ನಮ್ಮ ಸಂಘಟನೆಯಿಂದ ಇಂತಹ 10 ಹಲವು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಖಿಲ ಕರ್ನಾಟಕ ಕಾರ್ಮಿಕ ಪ್ರಜಾ ವೇದಿಕೆಯ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಜೈನ್ ಶೇಕ್ ಫಯಾಜ್ ಮಾತನಾಡಿ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರಾದ ಸತೀಶ್ ಮೀಸೆ ಅವರು ತುಮಕೂರಿನಂತಹ ಬೃಹತ್ ನಗರದಲ್ಲಿ ಉಚಿತವಾಗಿ ದೊಡ್ಡಮಟ್ಟದ ಆರೋಗ್ಯ ತಪಸನ ಶಿಬಿರವನ್ನು ನಡೆಸುತ್ತಿರುವುದು ಜನ ಮೆಚ್ಚುವ ಕೆಲಸವಾಗಿದ್ದು ಮುಂದಿನ ದಿನಗಳಲ್ಲಿ ಇದೇ ರೀತಿಯಾಗಿ ಸಾರ್ವಜನಿಕರ ಹಿತಾಸಕ್ತಿ ಕಾಯುವಂತಹ ಪ್ರಮುಖ ಕೆಲಸಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಅಖಿಲ ಕರ್ನಾಟಕ ಕಾರ್ಮಿಕ ಪ್ರಜಾ ವೇದಿಕೆಯ ಯುವ ಘಟಕದ ಅಧ್ಯಕ್ಷರಾದ ಆನಂದ್ ಸ್ಯಾಂಡಲ್ ವುಡ್ ಅವರು ಮಾತನಾಡುತ್ತಾ ಬಡ ರೋಗಿಗಳ ಅನುಕೂಲಕ್ಕಾಗಿ ನಾನು ಕೂಡ ಇಂದು ಉಚಿತ ಆರೋಗ್ಯ ಶಿಬಿರದಲ್ಲಿ ರಕ್ತದಾನವನ್ನ ಮಾಡಿದ್ದು ಎಲ್ಲಾರು ತಮ್ಮ ಕೈಲಾದ ಮಟ್ಟಿಗೆ ಬಡವರ ಆರೋಗ್ಯದ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕಾರ್ಮಿಕ ಪ್ರಜಾ ವೇದಿಕೆಯ ಗೌರವಾಧ್ಯಕ್ಷರಾದ ಯೋಗ ನರಸಿಂಹಣ್ಣ ಜಿಲ್ಲಾಧ್ಯಕ್ಷರಾದ ವಸೀಮ್ ಅನ್ವರ್ ಪಾಷಾ ತೇಜಸ್ ಗುಬ್ಬಿ ತಾಲೂಕು ಅಧ್ಯಕ್ಷರಾದ ಚನ್ನಬಸಣ್ಣ ಆಟೋ ಉಪಾಧ್ಯಕ್ಷ ರಮೇಶ್ ಅಂಬೇಡ್ಕರ್ ಸೇನೆ ರಾಜ್ಯ ಕಾರ್ಯದರ್ಶಿ ನರಸಿಂಹಮೂರ್ತಿ ಸಮಾಜ ಸೇವಕರಾದ ಮಹಾದೇವಣ್ಣ, ಕನ್ನಡ ಪ್ರಕಾಶ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಇದೆ ವೇಳೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ವೇದಿಕೆ ಕಾರ್ಯಕ್ರಮದಲ್ಲಿ ಸಂಜೆ ವಿವಿಧ ರಾಜಕೀಯ ಮುಖಂಡರು ಹಾಗೂ ವಿವಿಧ ಮಠಾಧೀಶರುಗಳು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಸಂದರ್ಭದಲ್ಲಿ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.