Wednesday, 11th December 2024

ಜನರ ಹೃದಯಾಂತರಾಳದ ಪ್ರೀತಿ ಮರೆಯಲಾರೆ: ನಿವೃತ್ತ ಮುಖ್ಯಶಿಕ್ಷಕ ಈರಪ್ಪ

ತುಮಕೂರು: ಊರಿನ ಜನರ ಹೃದಯಾಂತರಾಳದ ಪ್ರೀತಿ ಮರೆಯಲಾರೆ ಎಂದು ನಿವೃತ್ತ ಮುಖ್ಯಶಿಕ್ಷಕ ಈರಪ್ಪ ತಿಳಿಸಿದರು.

ಜಿಲ್ಲೆಯ ಚಿ.ನಾ.ಹಳ್ಳಿ ತಾಲೂಕಿನ ಹೊಸಹಟ್ಟಿ ಸರಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಜು.30ರಂದು ನಿವೃತ್ತಿ ಯಾದ ಸಂದರ್ಭದಲ್ಲಿ ಗ್ರಾಮ ಸ್ಥರು, ಎಸ್.ಡಿ.ಎಂ.ಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು ದಂಪತಿಗಳಿಗೆ ಹಮ್ಮಿ ಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಊರಿನ ಪ್ರತಿಯೊಬ್ಬರೂ ಸೇವಾವಧಿಯಲ್ಲಿ ಒಂದು ಕುಟುಂಬದ ಸದಸ್ಯನಂತೆ ನನ್ನನ್ನು ಗೌರವಿಸಿ ಶಾಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಸೇವೆಯಿಂದ ನಿವೃತ್ತಿಯಾಗಿರಬಹುದು ಆದರೆ ಊರಿನೊಂದಿಗೆ, ಜನರೊಂದಿ ಗಿನ ಬಾಂಧವ್ಯ ಹೃದಯದಲ್ಲಿ ಮನೆ ಮಾಡಿದೆ ಎಂದು ಬಾವುಕರಾದರು.

ಶಾಲೆಯ ಅಭಿವೃದ್ಧಿ ಜತೆಗೆ ಉತ್ತಮ ಪಾಠ, ಪ್ರವಚನ ಮಾಡಿ ಮಕ್ಕಳ ಬಾಳಿಗೆ ದಾರಿದೀಪವಾಗಿದ್ದ ಮುಖ್ಯಶಿಕ್ಷಕರಾದ ಈರಪ್ಪ ಅವರು ನಿವೃತ್ತಿಯಾಗುತ್ತಿರುವುದು ಇಡೀ ಊರಿನ ಮಂದಿಯಲ್ಲಿ ಬೇಸರ ಮೂಡಿಸಿದೆ. ಆದರೆ ಅವರ ವ್ಯಕ್ತಿತ್ವ, ನಡತೆ, ಕಾರ್ಯ ವೈಖರಿ ಅನುಕರಣೀಯ ಎಂದು ಹಳೆಯ ವಿದ್ಯಾರ್ಥಿಗಳು ತಿಳಿಸಿದರು.

ಈ ವೇಳೆ ಶಾಲೆಯ ಬೋಧಕ ವರ್ಗ, ಗ್ರಾಮದ ಮುಖಂಡರು,ಎಸ್.ಡಿಎಂ.ಸಿ ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತ ರಿದ್ದರು.