Wednesday, 11th December 2024

BsYediyurappa: ಮಾಜಿ ಸಿಎಂ ಬಿಎಸ್‌ವೈಗೆ ಎದುರಾಯ್ತು ಸಂಕಷ್ಟ ?

BSY

ಬೆಂಗಳೂರು: ಮಮತಾ (Mamatha) ಸಾವಿನ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಮುಖ್ಯಸ್ಥೆ (Women commission chief) ನಾಗಲಕ್ಷ್ಮೀ ಚೌಧರಿ (Nagalakshmi Chaudhary) ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಮಮತಾ ಸಾವಿನ ಬಗ್ಗೆ ಮಹಿಳಾ ಆಯೋಗ ಅನುಮಾನ ವ್ಯಕ್ತಪಡಿಸಿದ್ದು, ಯಡಿಯೂರಪ್ಪ (BSYediyurappa) ವಿರುದ್ಧದ ಫೋಕ್ಸೋ ಪ್ರಕರಣಕ್ಕೆ ಮರುಜೀವ ನೀಡಿದಂತಾಗಿದೆ. ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದು ಸೂಕ್ತ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಮುಖ್ಯಸ್ಥೆ ನಾಗಲಕ್ಷ್ಮೀ ಚೌಧರಿ ಪತ್ರ ಮುಖೇನ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬಾಲಕಿಗೆ ಮಾಜಿ ಸಿಎಂ ಲೈಂಗಿಕ ಕಿರುಕುಳ (sexual harassment) ನೀಡಿದ್ದಾರೆಂದು ಆರೋಪಿಸಿ, ಬಾಲಕಿ ತಾಯಿ ಮಮತಾ ಮಾಜಿ ಸಿಎಂ ವಿರುದ್ಧ ಫೋಕ್ಸೋ (POCSO)ಪ್ರಕರಣ ದಾಖಲಿಸಿದ್ದರು. ಕೆಲ ದಿನಗಳ ಬಳಿಕ ಬಾಲಕಿ ತಾಯಿ ಮಮತಾ ಮೃತಪಟ್ಟರು.