Wednesday, 11th December 2024

ಕೇಂದ್ರ ಸರಕಾರದ ವಿರುದ್ಧ ಅಕ್ಕಿ ವ್ಯಾಪಾರಿಗಳ ಪ್ರತಿಭಟನೆ

ಆಹಾರ ಪದರ‍್ಥಗಳಿಗೆ ಜಿಎಸ್ಟಿ ತೆರಿಗೆ ವಿಧಿಸುವುದಕ್ಕೆ ವಿರೋಧ

ತುಮಕೂರು: ತೆರಿಗೆ ರಹಿತವಾಗಿದ್ದ ಅಗತ್ಯ ವಸ್ತುಗಳು, ಆಹಾರ ಪದರ‍್ಥಗಳ ಮೇಲೆ ಶೇ. ೫ ರಷ್ಟು ಜಿಎಸ್ಟಿ ತೆರಿಗೆ ವಿಧಿಸಿ ಜು. ೧೮ ರಿಂದ ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಜಿಲ್ಲಾ ಅಕ್ಕಿ ಗಿರಣಿದಾರರ ಸಂಘ, ಚಿಲ್ಲರೆ, ಸಗಟು ವ್ಯಾಪಾರಸ್ಥರು ಹಾಗೂ ರೈತರು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಟೌನ್ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಮಂದಿ ರ‍್ತಕರು, ರೈತರು ಕೇಂದ್ರ ರ‍್ಕಾರದ ಧೋರಣೆ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಬಿ.ಹೆಚ್. ರಸ್ತೆ, ಎಂ.ಜಿ. ರಸ್ತೆ, ಗುಂಚಿ ರ‍್ಕಲ್ ಮುಖೇನ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ ರ‍್ತಕರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾ ಅಕ್ಕಿ ಗಿರಣಿದಾರರ ಸಂಘ, ಆಹಾರ ಧಾನ್ಯಗಳ ರ‍್ತಕರ ಸಂಘ, ಛೇಂಬರ್ ಆಫ್ ಕಾರ‍್ಸ್, ಚಿಲ್ಲರೆ ವ್ಯಾಪಾರಸ್ಥರು, ಮಂಡಿಪೇಟೆ ಅಂಗಡಿಗಳ ರ‍್ತಕರು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಕೇಂದ್ರ ರ‍್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿ ಕೂಡಲೇ ಅಗತ್ಯ ವಸ್ತುಗಳಿಗೆ ವಿಧಿಸಲು ನರ‍್ಧರಿಸಿರುವ ಶೇ. ೫ ರಷ್ಟು ಜಿಎಸ್ಟಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಅಕ್ಕಿ ಗಿರಣಿದಾರರ ಸಂಘದ ಅಧ್ಯಕ್ಷ ಆರ್ಎಲ್. ರಮೇಶ್ಬಾಬು ಮಾತನಾಡಿ, ಕೇಂದ್ರ ರ‍್ಕಾರ ಅಗತ್ಯ ವಸ್ತುಗಳ ಮೇಲೆ ಶೇ. ೫ ರಷ್ಟು ಜಿಎಸ್ಟಿ ಯನ್ನು ಜು. ೧೮ ರಿಂದ ಜಾರಿಗೊಳಿಸಲು ಮುಂದಾಗಿರುವುದು ಖಂಡನೀಯ. ಇದರಿಂದ ಜನಸಾಮಾನ್ಯರಿಗೆ, ರೈತರಿಗೆ ತುಂಬಾ ತೊಂದರೆಯಾಗಲಿದೆ.

ರೈತರು ಬೆಳೆದಿರುವ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುವುದಿಲ್ಲ. ಕೂಡಲೇ ಕೇಂದ್ರ ರ‍್ಕಾರ ದಿನ ಬಳಕೆ ವಸ್ತುಗಳ ಮೇಲೆ ಶೇ. ೫ ರಷ್ಟು ಜಿಎಸ್ಟಿ ವಿಧಿಸಲು ಮುಂದಾಗಿರುವುದು ಕೂಡಲೇ ರದ್ದುಗೊಳಿಸಬೇಕು. ಇದನ್ನು ರದ್ದುಗೊಳಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಅಕ್ಕಿ ಗಿರಣಿದಾರರ ಸಂಘದ ಗೌರವಾಧ್ಯಕ್ಷ ಎನ್.ಆರ್. ವಿಶ್ವಾರಾಧ್ಯ, ಕರ‍್ಯಾಧ್ಯಕ್ಷ ಕೆ.ಜಿ. ಮುನಿಗಂಗಪ್ಪ, ಕರ‍್ಯರ‍್ಶಿ ನಂಜುಂಡ ಪ್ರಸಾದ್, ಧಾನ್ಯ ರ‍್ತಕರ ಸಂಘದ ಜಿ.ಎಸ್. ಪರಮಶಿವಯ್ಯ, ಛೇಂಬರ್ ಆಫ್ ಕಾರ‍್ಸ್ನ ಮಾಜಿ ಅಧ್ಯಕ್ಷ ಟಿ.ಆರ್. ಲೋಕೇಶ್, ರೈತ ಸಂಘದ ಜಗದೀಶ್, ಪ್ರಸನ್ನಕುಮಾರ್, ನಾರಾಯಣ್, ಎಂ.ಎನ್. ಲೋಕೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.