Friday, 13th December 2024

ದಲಿತ ಬಾಲಕ ಕೊಲೆ: ಬಿಜೆಪಿ ಎಸ್ಸಿ ಮೋರ್ಚಾ ಪ್ರತಿಭಟನೆ

ತುಮಕೂರು: ರಾಜ್ಯಸ್ಥಾನದ ಸುರಾನ ಗ್ರಾಮದ ಶಾಲೆಯೊಂದರಲ್ಲಿ ದಲಿತ ಸಮುದಾಯದಕ್ಕೆ ಸೇರಿದ ಬಾಲಕ ಕುಡಿಯುವ ನೀರಿನ ಮಡಿಕೆ ಮುಟ್ಟಿನೆಂಬ ಕಾರಣಕ್ಕೆ ಶಾಲೆಯ ಶಿಕ್ಷಕನೇ ಹಲ್ಲೆ ನಡೆಸಿ, ಕೊಂದಿರುವ ಘಟನೆಯನ್ನು ಖಂಡಿಸಿ, ತುಮಕೂರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಶುಕ್ರವಾರ ಟೌನ್‌ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಯಲ್ಲಿ ನೂರಾರು ಎಸ್ಸಿ ಮೋರ್ಚಾ ಪದಾ ಧಿಕಾರಿಗಳು, ಸದಸ್ಯರುಗಳು ಭಾಗವಹಿಸಿ, ಮಾನವ ಸರಪಳಿ ನಿರ್ಮಿಸಿ,ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿಕೊಲೆ ಮಾಡಿರುವ ರಾಜಸ್ಥಾನ ಸರಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರ, ರಾಜ್ಯ ಸ್ಥಾನದ ಸುರಾನ ಗ್ರಾಮದ ಶಾಲೆಯಲ್ಲಿ ಓದುತ್ತಿದ್ದ ದಲಿತ ಬಾಲಕ ನೀರು ಕುಡಿಯುವ ನೀರಿನ ಮಡಿಕೆ ಮುಟ್ಟಿದನೆಂಬ ಕಾರಣಕ್ಕೆ ಶಿಕ್ಷಕ ಚಹೀಲ್ ಸಿಂಗ್ ಹಲ್ಲೆ ನಡೆಸಿದ್ದು, ಸಾವು ಬದುಕಿನ ನಡುವೆ 23 ದಿನಗಳ ಕಾಲ ಹೋರಾಟ ನಡೆಸಿದ ಬಾಲಕ ಸಾವನ್ನಪ್ಪಿದ್ದಾನೆ.
ಇದನ್ನು ಖಂಡಿಸಿ,ಅಲ್ಲಿನ ಕಾಂಗ್ರೆಸ್ ಪಕ್ಷದ ಶಾಸಕರು, ಸ್ಥಳೀಯ ಕಾರ್ಪೋರೇಟ್‌ಗಳು ಸಹ ರಾಜೀನಾಮೆ ನೀಡಿದ್ದಾರೆ. ಆದರೆ ಇದುವರೆಗೂ ಕಾಂಗ್ರೆಸ್ ಪಕ್ಷದ ಅಧಿನಾಯಕರು ಈ ಬಗ್ಗೆ ಚಕಾರವೆತ್ತಿಲ್ಲ.
ಅಲ್ಲದೆ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕ ರಾಗಿರುವ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆ ಅವರಾಗಲಿ ಕನಿಷ್ಠ ಖಂಡನೀಯ ಹೇಳಿಕೆ ನೀಡಿಲ್ಲ. ಬೇರೆ ಪಕ್ಷದ ಸಣ್ಣ ಪ್ರಕರಣವನ್ನೇ ದೊಡ್ಡದು ಮಾಡಿ ಮಾತನಾಡುವ ಕಾಂಗ್ರೆಸ್ ನಾಯಕರು, ತಮ್ಮದೇ ಪಕ್ಷವಿರುವ ರಾಜಸ್ಥಾನ ದಲ್ಲಿ ನಡೆದ ದಲಿತ ಬಾಲಕನ ಹತ್ಯೆಯ ಬಗ್ಗೆ ತುಟಿ ಬಿಚ್ಚದಿರುವುದು ಇವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ.ಇದು ಕೇವಲ ದಲಿತರಿಗೆ ಆಗಿರುವ ಅವಮಾನವಲ್ಲ. ಇಡೀ ಮನುಕುಲವೇ ತಲೆತಗ್ಗಿಸುವ ವಿಚಾರ ಎಂದು ಕಿಡಿಕಾರಿದರು.
ದಲಿತ ಬಾಲಕನ ಹತ್ಯೆಯ ಬೆನ್ನೇಲ್ಲೆ, ತಾನು ನೀಡಿದ್ದ ಸಾಲವನ್ನು ಕೇಳಲು ಹೋದ ದಲಿತ ಸಮುದಾಯದ ಮಹಿಳೆಯನ್ನು ಅಲ್ಲಿನ ಸವರ್ಣಿಯರು ಬೆಂಕಿ ಹಚ್ಚಿ ಸಜೀವವಾಗಿ ದಹಿಸಿದ್ದಾರೆ. ಇದೇ ರೀತಿಯ ಘಟನೆಗಳು ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜಸ್ಥಾನದಲ್ಲಿ ಆಗಿಂದಾಗ್ಗೆ ನಡೆಯುತ್ತಿದೆ.ಹಾಗಾಗಿ ಕೂಡಲೇ ರಾಜ್ಯಪಾಲರು ಅಲ್ಲಿನ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ವಜಾ ಮಾಡಬೇಕು ಹಾಗೂ ಈ ಕುರಿತು ಕೂಡಲೇ ರಾಷ್ಟçಪತಿಯವರಿಗೆ ರಾಜಸ್ಥಾನದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ವರದಿ ನೀಡಿ, ಸರಕಾರವನ್ನು ವಜಾ ಮಾಡಲು ಶಿಫಾರಸ್ಸು ಮಾಡಬೇಕೆಂದು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಆಗ್ರಹಿಸುತ್ತದೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ,ರಾಜಸ್ಥಾನದಲ್ಲಿ ನಡೆದಿರುವ ಘಟನೆ ಮನುಷ್ಯನ ಅಸ್ಪೃಷ್ಯತೆ ಎಷ್ಟು ಅಡಗಿದೆ ಎಂಬುದು ತೋರಿಸುತ್ತದೆ.ಧರ್ಮಗುರುಗಳು ಮತ್ತು ಮಠಾಧೀಶರು ಈ ಘಟನೆಯ ಬಗ್ಗೆ ಕನಿಷ್ಠ ಚಕಾರವೆತ್ತ ಬೇಕಿತ್ತು. ಇದುವರೆಗೂ ಆ ಕೆಲಸ ಆಗಿಲ್ಲ. ಈಗಲಾದರೂ ಸದರಿ ಘಟನೆ ಕುರಿತು ದ್ವನಿ ಎತ್ತಬೇಕಿದೆ.ಅಸ್ಪೃಷ್ಯತೆ ನಿವಾರಣೆಗೆ ಎಲ್ಲರೂ ಕೈಜೋಡಿಸಬೇಕಿದೆ.ಅಂಬೇಡ್ಕರ್ ಹಿಂದೆ ಚೌದರ್ ಕೆರೆಯ ನೀರು ಮುಟ್ಟಿದಾಗ ಅವರ ತಲೆಯನ್ನು ಒಡೆಯಲಾಗಿತ್ತು. ಇಂದಿಗೂ ಅದು ಮುಂದುವರೆದಿದೆ ಎಂದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿ,ರಾಜಸ್ಥಾನ ಸರಕಾರ ದಲಿತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ದಲಿತ ಬಾಲಕನ ಹತ್ಯೆ ಮತ್ತು ದಲಿತ ಸ್ತಿçÃಯ ಸಜೀವ ದಹನ ಸಾಕ್ಷಿಯಾಗಿದೆ.ಈ ಘಟನೆ ದೇಶದ ಸಂವಿಧಾನಕ್ಕೆ ಅದ ಅಪಮಾನ. ಒಂದು ಸಮುದಾಯಕ್ಕೆ ಆದ ಅಪಮಾನವಲ್ಲ. ಬದುಕುವ ಹಕ್ಕೆ ಇಲ್ಲವೆಂದ ಮೇಲೆ ಇನ್ನೂ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು ಯಾವ ಮಟ್ಟದಲ್ಲಿವೆ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ.ಆದ್ದರಿಂದ ಕೇಂದ್ರ ಸರಕಾರ ಕೂಡಲೇ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಕೂಡಲೇ ವಜಾ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಪದಾಧಿಕಾರಿಗಳಾದ ನವೀನ್, ವರದರಾಜು, ಟೂಡಾ ಸದಸ್ಯ ಸತ್ಯಮಂಗಲ ಜಗದೀಶ್, ಮಾಜಿ ಸದಸ್ಯ ಪ್ರತಾಪ್,ಮುಖಂಡರಾದ ಕೊಪ್ಪಲ್ ನಾಗರಾಜು, ಶಂಕರ್, ಅಂಜನಮೂರ್ತಿ,ಮನೋಹರಗೌಡ, ಶಬ್ಬೀರ್, ಯುವಮೋರ್ಚಾ ಅಧ್ಯಕ್ಷ ನಾಗೇಂದ್ರ, ರಾಜಣ್ಣ,ಜಿಲ್ಲಾ ವಕ್ತಾರ ಕೆ.ಪಿ.ಮಹೇಶ್, ರಕ್ಷಿತ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.