Wednesday, 11th December 2024

ಎಸ್.ಮಾರೆಪ್ಪರಿಂದ ಜೀವ ಬೆದರಿಕೆ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು: ಸರ್ಕಾರಿ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಜೀವ ಬೆದರಿಕೆ ಹಾಕಿರುವ ಎಸ್.ಮಾರೆಪ್ಪ ವಕೀಲರು ವಿರುದ್ದ ಭಾರತೀಯ ದಂಡ ಸಂಹಿತೆ ಕಾನೂನಿನ ಪ್ರಕಾರ ವಕೀಲ ವೃತ್ತಿಯಿಂದ ವಜಾಗೊಳಿಸಿ ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿ ದಿನ ಬೆಳಗಿನ ಪರಿವೀಕ್ಷಣೆಯಲ್ಲಿ ಪರಿಸರ ಅಭಿಯಂತರರು ಸರ್ಕಾರಿ ಕರ್ತವ್ಯದಲ್ಲಿ ನಿರತನಾಗಿ ನಮ್ಮ ನೇರ ಪಾವತಿ ಪೌರಕಾರ್ಮಿಕ ನೌಕರರ ಕುಂದು ಕೊರತೆಗಳ ವಿಚಾರಿಸುತ್ತಿರುವಾಗ ಏಕಾಏಕಿ ಎಸ್.ಮಾರಪ್ಪ ವಕೀಲರು ನ.೭ ರಂದು ಬೆಳಗ್ಗೆ ೭ ಗಂಟೆಗೆ ತೀನ್ ಕಂಡೀಲ್ ವೃತ್ತದ ಬಳಿ ಬಂದು ಪರಿಸರ ಅಭಿಯಂತರರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂಧಿಸಿ ಜೀವ ಬೆದಲಿಕೆ ಹಾಕಿ ಮಾನನಷ್ಟ ಮಾಡಿ. ಮನ ಬಂದಂತೆ ಪರಿಸರ ಅಭಿಯಂತರರಿಗೆ ಮಾನಸಿಕ ಬಾದಿತನಾಗುವಂತೆ ಎಲ್ಲರೆದುರಲ್ಲಿ ಅವಹೇಳನಕಾರಿ ಶಬ್ದಗಳಿಂದ ನಿಂಧಿಸಿದ್ದಾರೆ ಎಂದು ಆರೋಪಿಸಿದರು.

ಎಸ್.ಮಾರೆಪ್ಪ ವಕೀಲರು ಯಾವುದೇ ದಾಖಲಾತಿಗಳಿಲ್ಲದೇ ನಗರಸಭೆ ಪೌರಕಾರ್ಮಿಕರನ್ನೊಳಗೊಂಡ ಛಾಯಾಚಿತ್ರವನ್ನು ಬಳಸಿಕೊಂಡು ನಗರಸಭೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಪಪ್ರಚಾರ ಮಾಡುವುದರಿಂದ ನಗರಸಭೆಯ ಘನತೆ ಗೌರವಕ್ಕೆ ಹಾಗೂ ಪಾರದರ್ಶಕ ನಿಯಮದಡಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಒಂದು ರೀತಿಯ ಅವಮಾನವೇ ಸರಿ.

ಹಾಗಾಗಿ ಸದರಿ ಆಪಾದಿತ ಎಸ್. ಮಾರೆಪ್ಪ ವಕೀಲರ ವಿರುದ್ಧ ವಿರುದ್ಧ ಭಾರತೀಯ ದಂಡ ಸಂಹಿತೆ ಕಾನೂನಿನ ಪ್ರಕಾರ ವಕೀಲ ವೃತ್ತಿಯಿಂದ ವಜಾಗೊಳಿಸಿ ಕೂಡಲೇ ಬಂದಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.