Thursday, 25th April 2024

ಹರ್ಷ ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆ

ಶಿರಸಿ : ವಿಶ್ವಹಿಂದೂ ಪರಿಷತ್, ಬಜರಂಗ ದಳ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಖಂಡಿಸಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಉಪವಿಭಾಧಿಕಾರಿ ಕಚೇರಿ ಎದುರು ನೂರಾರು ಹಿಂದೂ ಕಾರ್ಯಕರ್ತರು ಸೇರಿ ವಿವಿಧ ಘೋಷಣೆ ಗಳನ್ನು ಕೂಗಿ ಹತ್ಯೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹತ್ಯೆ ಮಾಡಿದವರಿಗೆ ಅತಿ ಶೀಘ್ರದಲ್ಲಿ ಅತ್ಯಗ್ರ ಶಿಕ್ಷೆ ನೀಡುವಂತೆ ಕ್ರಮ ಆಗಬೇಕು ಎಂದು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಹಿಂದೂ ಧರ್ಮದ ರಕ್ಷಣೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವ ಯುವಕನ ಕಗ್ಗೋಲೆ ಹಿಂದಿರುವ ಮೂಲ ಭೂತವಾದಿ ಸಂಘಟನೆಗಳ ದುಷ್ಕರ್ಮಿ ಗಳನ್ನು ಕೂಡಲೇ ಬಂಧಿಸಿ ಅವರ ಹಿಂದಿರುವ ಜಿಹಾದಿ ಚಟುವಟಿಕೆ ಗಳಿಗೆ ಪ್ರೇರಣೆ ನೀಡುವ ಶಕ್ತಿಗಳನ್ನೂ ಸಹ ಬುಡಸಮೇತ ಕಿತ್ತೊಗೆಯಬೇಕು. ಹತ್ಯೆಯಾಗಿರುವ ಹಿಂದೂ ಯುವಕನ ರಕ್ತಕ್ಕೆ ನ್ಯಾಯ ಸಿಗಲೇಬೇಕು.

ಕೊಲೆಯಾದ ಎರಡು ದಿನದ ಒಳಗಾಗಿ ಘಟನೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ ಎಲ್ಲಾ ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ. ಆದರೆ ಈ ಘಟನೆ ಕೇವಲ ಕೊಲೆಯಲ್ಲಿ ಪಾಲ್ಗೊಂಡ ಆರು ವ್ಯಕ್ತಿಗಳಿಂದ ಮಾತ್ರ ನಡೆದಿಲ್ಲ. ಇದರ ಹಿಂದೆ ಒಂದು ದೊಡ್ಡ ಶಕ್ತಿ ಇದೆ. ರಾಜ್ಯದಲ್ಲಿ ಇನ್ನು ಇಂತಹ ಘಟನೆಗಳು ಮರುಕಳಿಸಬಾರದು ಎಂತಾದರೆ ಆ ಶಕ್ತಿಯನ್ನು ಗುರುತಿಸಿ ಅವರನ್ನು ಮಟ್ಟಹಾಕಬೇಕಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ರಾಜ್ಯದಲ್ಲಿ ನಡೆದಂಥ ಎಲ್ಲಾ ಹಿಂದೂ ಕಾರ್ಯಕರ್ತರ ಕೊಲೆಯ ಹಿಂದೆಯೂ ಮತಾಂಧ ಪಿ.ಎಫ್.ಐ, ಎಸ್.ಡಿ.ಪಿ.ಐ, ಸಂಘಟನೆ ಇರುವುದು ಸ್ಪಷ್ಟವಾಗಿತ್ತು. ಇದರಲ್ಲೂ ಕೂಡ ಅವರದೇ ಹಸ್ತ ಇರುವುದರಲ್ಲಿ ಯಾವುದೇ ಸಂದೇಹ ಇಲ್ಲ. ಸಮಾಜದಲ್ಲಿ ಕೋಮು ಗಲಭೆ ಉಂಟು ಮಾಡುತ್ತಿರುವ ಮೂಲಭೂತವಾದಿ ಸಂಘಟನೆಗಳಾದ ಎಸ್.ಡಿ.ಪಿ.ಐ. ಪಿ.ಎಫ್.ಐ., ಕೆ.ಎಫ್.ಡಿ. ಈ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು.

ಹಿಂದೂ ಸಂಘಟನೆಯ ಕಾರ್ಯಕರ್ತ “ಹರ್ಷ” ರವರನ್ನು ಕೊಲೆ ಮಾಡಿದ ಪಾಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ದುಷ್ಕರ್ಮಿಗಳ ವಿರುದ್ಧ ಅತ್ಯುರ ಸೆಕ್ಷನ್ ಗಳನ್ನು ಹಾಕಿ ಅವರಿಗೆ ಜಾಮೀನು ದೊರಕದಂತೆ ಮಾಡಿ ಅತೀ ಶೀಘ್ರದಲ್ಲಿ ಶೀಘ್ರದಲ್ಲಿ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವಂತೆ ವಿಶೇಷ ನ್ಯಾಯಾ ಧೀಶರನ್ನು ನೇಮಿಸಿ ಅತಿ ಶೀಘ್ರ ಮರಣದಂಡನೆ ಶಿಕ್ಷೆ ವಿಧಿಸಬೇಕು. ಅಥವಾ ಕಾನೂನಿನಲ್ಲಿ ಅವಕಾಶವಿದ್ದಲ್ಲಿ ಈ ದುಷ್ಕರ್ಮಿಗಳಿಗೆ ನಡುರಸ್ತೆಯಲ್ಲಿ ಗುಂಡನ್ನಿಟ್ಟು ಶಿಕ್ಷೆಯನ್ನು ವಿಧಿಸುವಂತಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಬಜರಂಗದಳದ ವಿಠ್ಠಲ ಪೈ ಮಾತನಾಡಿ, ಹಿಂದೂ ಕಾರ್ಯಕರ್ತರ ಹತ್ಯೆಗೆ ಪ್ರತಿಕ್ರಿಯೆ ಅತ್ಯಗತ್ಯ. ಪದೇ ಪದೇ ಇಂಥ ಘಟನೆಗಳು ನಡೆದರೆ ನಮ್ಮದೇ ಆದ ಮಾರ್ಗದಲ್ಲಿ ಉತ್ತರಿಸುವುದು ಅನಿವಾರ್ಯ. ಸರ್ಕಾರ ತಕ್ಷಣ ಘಟನೆಗೆ ಕಾರಣರಾದವರಿಗೆ ಮರಣದಂಡನೆ ನೀಡಬೇಕು ಎಂದು ಆಗ್ರಹಿಸಿ ದರು.

ಪ್ರತಿಭಟನೆಯಲ್ಲಿ ಹಿಂದೂ ಪ್ರಮುಖರಾದ ಗೋಪಾಲ ದೇವಡಿಗ, ವೆಂಕಟೇಶ ನಾಯಕ, ಚಂದ್ರು ಎಸಳೆ, ನರಸಿಂಹ ಹೆಗಡೆ ಬಕ್ಕಳ, ನಾಗರಾಜ ಶೆಟ್ಟಿ, ಗೋವಿಂದ ನಾಯ್ಕ, ಪ್ರಕಾಶ ಸಾಲೇರ, ಸಂಧ್ಯಾ ಕುರ್ಡೇಕರ, ವೀಣಾ ಶೆಟ್ಟಿ, ಸದಾನಂದ ಭಟ್ ಮುಂತಾದವರು ಇದ್ದರು

 

error: Content is protected !!