ತಿಪಟೂರು: ಸೊಗಡು ಜನಪದ ಹೆಜ್ಜೆ ಸಂಘ ಮತ್ತು ಇನ್ನು ಹಲವಾರು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಲ್ಪತರು ನಾಡಿನಲ್ಲಿ ರಾಗಿ ರುಚಿ ಸವಿಯೋಣ ಬಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಡಿ.23, 24 ಎರಡು ದಿನಗಳ ಕಾಲ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.ಮಾಜಿ ಪ್ರಧಾನಿ ಚೌದರಿ ಚೌಹಾಣ್ ರವರ ಗೌರವಾರ್ಥಕವಾಗಿ, ರೈತ ದಿನಾಚರಣೆ ಆಚರಿಸುವ ಸಲುವಾಗಿ ಮತ್ತು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷದ ರಾಗಿ ರುಚಿ ಕಾರ್ಯಕ್ರಮ 23 ನೇ ತಾರೀಕಿನಂದು ತಿಪಟೂರಿನ ಶ್ರೀ ಸತ್ಯ ಗಣಪತಿ ಅಮೃತ ಭವನದಲ್ಲಿ ಆಯೋಜಿಸಲಾಗಿದ್ದು, ಮುಂದಿನ ನಮ್ಮ ಯುವ ಪೀಳಿಗೆ ನಮ್ಮ ಹಿಂದಿನ ಕಾಲದ ಆಹಾರ ಪದ್ಧತಿಯನ್ನು ಉಳಿಸಿ ಮತ್ತು ಬೆಳೆಸಿಕೊಂಡು, ಮುಂದಿನ ಯುವ ಪೀಳಿಗೆ ಆರೋಗ್ಯದಿಂದ ಇರಬೇಕು ಎಂಬುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ಈ ಕಾರ್ಯಕ್ರಮಕ್ಕೆ ರಾಗಿಯಿಂದ ತಯಾರಿಸಿದ ವಿವಿಧ ರೀತಿಯ ಖಾದ್ಯಗಳನ್ನು ಪ್ರದರ್ಶನಕ್ಕೆ ಇಡುವುದರ ಜೊತೆಗೆ ಮಾರಾಟ ಕೂಡ ಮಾಡಲಾಗುತ್ತದೆ, ವಿವಿಧ ರೀತಿಯ ರಾಗಿ ತಳಿಗಳ ಪ್ರದರ್ಶನ ಕೂಡ ಏರ್ಪಡಿಸಲಾಗಿರುತ್ತದೆ.
ಮಹಿಳೆಯರಿಗೆ ರಾಗಿ ಬೀಸುವ ಸ್ಪರ್ಧೆ, ಪುರುಷರಿಗೆ ರಾಗಿ ಚೀಲ ಎತ್ತುವ ಸ್ಪರ್ಧೆ, ಮಕ್ಕಳಿಗೆ ರಾಗಿಗೆ ಸಂಬಂಧಪಟ್ಟ ಚಿತ್ರ ಬಿಡಿಸುವ ಸ್ಪರ್ಧೆ ಜೊತೆಗೆ ರಾಗಿ ಬಗ್ಗೆ ಪ್ರಬಂಧ ಬರೆಯುವ ಸ್ಪರ್ಧೆ ಕೂಡ ಏರ್ಪಡಿಸಲಾಗಿರುತ್ತದೆ ಎಂದು ಸೊಗಡು ಜನಪದ ಹೆಜ್ಜೆಯ ಕಾರ್ಯಕರ್ತರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.