Wednesday, 11th December 2024

ದೇವದುರ್ಗ: ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿದ ಕೆ.ಇರಬಗೇರಾ ಗ್ರಾಮಸ್ಥರು

ದೇವದುರ್ಗ: ಶಾಸಕರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ಅವರ ಬಡವರ,ರೈತರ ಹಾಗೂ ಜನಸಾಮನ್ಯರ ಪರವಾದ ಯೋಜನೆಗಳನ್ನು ಮತ್ತು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಹಾಗೂ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಕ್ಷೇತ್ರದ ಕೆ.ಇರಬಗೇರಾ ಗ್ರಾಮದ 40ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಜೆಡಿಎಸ್ ತೊರೆದು ಗ್ರಾಮ ಪಂಚಾಯತ ಸದಸ್ಯರುಗಳಾದ ವಿಷ್ಣು ನಾಯಕ ತೆಗ್ಗಿಹಾಳ, ತಿಮ್ಮನಗೌಡ ಚಿಂತಲಕುಂಟ, ಮುಖಂಡರಾದ ವಾಸುದೇವ ನಾಯಕ ತೆಗ್ಗಿಹಾಳ, ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

ಭಾನುವಾರದಂದು ಗಬ್ಬೂರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಸೇರ್ಪಡೆಯಾದರು. ಶಾಸಕ ಕೆ.ಶಿವನಗೌಡ ನಾಯಕ ಅವರು ನೂತನ ಕಾರ್ಯಕರ್ತರಿಗೆ ಪಕ್ಷದ ಶಾಲು ಹಾಕುವ ಮೂಲಕ ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತಿಸಿದರು.

ಇದೇ ವೇಳೆ ಶಾಸಕರು ಮಾತನಾಡಿ, ನಮ್ಮ ಅಧಿಕಾರವಧಿಯಲ್ಲಿನ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರುತ್ತಿರುವುದು ಹೆಮ್ಮೆಯ ವಿಷಯ. ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಬಲವರ್ಧನೆಗಾಗಿ ಹಗರಲಿರುಳು ಶ್ರಮಿಸಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷರಾದ ಕೆ.ಜಂಬಣ್ಣ ನೀಲಗಲ್, ಎಪಿಎಂಸಿ ಅಧ್ಯಕ್ಷರಾದ ಪ್ರಕಾಶ ಪಾಟೀಲ್ ಜೇರಬಂಡಿ, ನಿಂಗನಗೌಡ ಶಾಖೆ, ಶಿವನಗೌಡ ಶಾಖೆ, ರಂಗಪ್ಪ ಪೊ.ಪಾ, ವೆಂಕಟೇಶ ಕಂಪೆ, ಮಲ್ಲಿಕಾರ್ಜುನ, ಹನುಮಂತರಾಯ ಕಂಪೆ, ವೆಂಕಟೇಶ ಮಾನಸಗಲ್, ಪ್ರಕಾಶ್, ರಂಗನಾಥ, ಮಂಜುನಾಥ ಮಾಚನೂರು, ರಮೇಶ ಕಂಬಾರ, ರಮೇಶ ಕಾನಕುರ್ತಿ, ರಾಮಚಂದ್ರ ಪೊ.ಪಾ, ಬಾಬು ಕಲಾಲ್, ಶಿವಕುಮಾರ್ ಕಂಪೆ, ಭೀಮನಗೌಡ ಪೊ.ಪಾ, ಬೀರಲಿಂಗ ಗಲಗ, ಶಿವರಾಜ ಮಜ್ಜಿಗೆ, ರಂಗನಾಥ ಕಂಬಾರ್, ಬಸವರಾಜ ನವಿಲಗುಡ್ಡ, ಹನುಮರೆಡ್ಡಿ ಕುಪಗಲ್, ರಾಮಚಂದ್ರ, ಆಂಜಿನಯ್ಯ ನಾಯಕ, ಭೀಮಣ್ಣ ಜಕ್ಕನ್, ಗಣೇಶ್ ಮಾನೆ ನಾಯಕ ಸೇರಿದಂತೆ ಅನೇಕರಿದ್ದರು.